ಸಚಿವರು ಬಂದ್ರ…ಸ್ವಚ್ಚವಾಯಿತು ಮುದ್ದೇಬಿಹಾಳ ಕೃಷಿ ಇಲಾಖೆ ಕಛೇರಿ…!!! ರೈತರ ಕಾರ್ಯಕ್ರಮಕ್ಕೆ ರೈತರಿಗೇ ಇಲ್ಲಾ ಆಹ್ವಾನ ಪತ್ರಿಕೆ…! ಕೃಷಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕೆಲಸ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಅಂಬಿಗ್ ನ್ಯೂಸ್

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಸಾಕಷ್ಟು ದಿನಗಳಿಂದ ಹಾಲು ಪೊಂಪೆಯಂತಿದ್ದ ಮುದ್ದೇಬಿಹಾಳ ಕೃಷಿ ಸಹಾಯಕ ಕಛೇರಿ ವಾತಾವರಣವು ಸೋಮವಾರ ಸಂಜೆಯಾಗುತ್ತಿದ್ದಂತೆ ದಿಡೀರ್ ಬದಲಾವಣೆ ಕಂಡಿದೆ. ಇದರ ಹಿನ್ನೆಲೆ ಹುಡುಕಿಕೊಂಡು ಹೋದರೆ ಇದಕ್ಕೆ ಕಾರಣ ಫೆ.23 ಮಂಗಳವಾರದಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ ಅವರುಮುದ್ದೇಬಿಹಾಳ ತಾಲೂಕಿಗೆ ಪ್ರವಾಸ ಕೈಗೊಂಡಿರುವುದು ಎನ್ನುವುದು ತಿಳಿದು ಬಂದಿದೆ.

ಸಚಿವರ ಆಗಮನದ ಹಿನ್ನೆಲೆ ಕಛೇರಿಗೆ ನೂತನ ಕಂಪೌಂಡ ಸೇರಿದಂತೆ ಕಛೆರಿಯ ಆವರಣದಲ್ಲಿರುವ ಕೃಷಿ ಜಾಹೀರಾತು ಬೋರ್ಡಿಗೆ ನೂತನ ರಾಜ್ಯ ಸರಕಾರದ ಜಾಹೀರಾತಿನ ಪೋಸ್ಟರ್ ತಂತಾನೆ ಬಂದಿವೆ.



ಹೌದು, ಮುದ್ದೇಬಿಹಾಳ ಪಟ್ಟನದ ಹೃದಯ ಭಾಗದಲ್ಲಿರುವ ತಾಲೂಕಾ ಕೃಷಿ ಇಲಾಖೆ ಕಛೇರಿಯು ಅಕ್ಷರ ಸಹ ಹಾಳು ಬಿದ್ದ ಜಾಗದಂತಾಗಿತ್ತು. ಆದರೆ ಕೃಷಿ ಸಚಿವರು ಬರುತ್ತಿದ್ದಾರೆ ಎನ್ನುವ ವಿಷಯ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸಹಾಯಕ ಕೃಷಿ ಅಧಿಕಾರಿಗಳು ಕಛೆರಿಯ ಆವರಣವನ್ನು ಗರಸನ್ನು ಹಾಕಿ ತಾತ್ಪೂರ್ತಿಯಾಗಿ ಸ್ವಚ್ಚವಾಗಿಟ್ಟ ಘಟನೆ ಸೋಮವಾರ ನಡೆದಿದೆ.



ಮಂಗಮಾಯವಾದ ಕಾರ್ಯಕ್ರಮದ ಆಹ್ವಾನ ಪತ್ರಿಕೆ:

ಕೃಷಿ ಸಚಿವರು ಆಗಮನದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ತಾಲೂಕಿನ ಕವಡಿಮಟ್ಟಿಯಲ್ಲಿ ನಡೆಯಲಿರುವ ರೈತರೊಂದಿಗೊಂದು ದಿನ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ಆದರೆ ಮುದ್ರಿತಗೊಂಡ ಆಮಂತ್ರಣಾ ಪತ್ರಿಕೆ ಮಾತ್ರ ಯಾವ ರೈತನ ಕೈಗೂ ಸಿಕ್ಕಲ್ಲ ಎನ್ನುವುದು ವಿಪರ್ಯಾಸದ ವಿಷಯವಾಗಿದೆ. ಕನಿಷ್ಠ ಪಕ್ಷ ಸ್ಥಳೀಯ ರೈತ ಸಂಘದವರಿಗಾದರೂ ಆಮಂತ್ರಣ ಪತ್ರಿಕೆ ನೀಡುವ ಗೂಜಿಗೂ ಕೃಷಿ ಇಲಾಖೆ ಅಧಿಕಾರಿಗಳು ಹೋಗಿಲ್ಲ.

ಕಾಟಾಚಾರಕ್ಕೆ ಅಧಿಕಾರಿಗಳ ಸೇವೆ:

ಮುದ್ದೇಬಿಹಾಳ ತಾಲೂಕಿನ ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಕಾರ್ಯವನ್ನು ಮಾಡಬೇಕಾದ ಇಲ್ಲಿನ ಅಧಿಕಾರಿಗಳು ಬೇಕಾ ಬಿಟ್ಟಿಯಾಗಿ ಕಛೆರಿಯಲ್ಲಿ ಸಮಯ ಕಲೆಯುತ್ತಾರೆ. ಆದರೆ ತಾಲೂಕಿಗೆ ಕೃಷಿ ಸಚಿವರು ಬರುತ್ತಿದ್ದಾರೆ ಎಂಬ ವಿಷಯ ತಿಳಿದು ಕಾಟಾಚಾರಕ್ಕಾಗಿ ಕಛೇರಿಯನ್ನು ಸ್ವಚ್ಚವಿಡುವ ಕಾರ್ಯ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ರೈತರ ಸಂಘದವರಿಗೂ ಸಿಕ್ಕಿಲ್ಲಾ ಆಹ್ವಾನ ಪತ್ರಿಕೆ:

ಮುದ್ದೇಬಿಹಾಳ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ರೈತರ ಪರವಾಗಿ ಸಾಕಷ್ಟು ಹೋರಾಟ ಮಾಡುತ್ತಾ ಬಂದು ರೈತರಿಗೆ ಸದಾ ನ್ಯಾಯ ಒದಗಿಸುತ್ತಾ ಬಂದಿದೆ. ಆದರೆ ರೈತರೊಂದಿಗೆ ಒಂದು ದಿನ ಎಂಬ ಶಿರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಸಚಿವರು ಹಮ್ಮಿಕೊಂಡಿದ್ದು ಇದರ ಬಗ್ಗೆ ರೈತ ಸಂಘದವರಿಗೂ ಆಹ್ವಾನ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಆರೋಪಿಸಿದ್ದಾರೆ.

Be the first to comment

Leave a Reply

Your email address will not be published.


*