ಮುದ್ದೇಬಿಹಾಳ ತಾಲೂಕಿಗೆ ಸಮಗ್ರ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸಚಿವರಲ್ಲಿ ಮನವಿ: ಶಾಸಕ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ತಾಲೂಕಿನ ರೈತರು ಅಸ್ಥಿರವಾಗಿದ್ದಾರೆ. ಅವರನ್ನು ಸ್ಥರರಾಗಿ ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ನಾನು ಈಗಾಗಲೇ ತಾಲೂಕಿನಲ್ಲಿ ಸಮೀಕ್ಷೆ ಮಾಡಿ ತಾಲೂಕಿನಲ್ಲಿ ಸಮಗ್ರ ಕೃಷಿ ಸಂಶೋಧನಾ ಕೇಂದ್ರವನ್ನು ತಾಲೂಕಿಗೆ ಕೊಡಬೇಕು ಎಂದು ಕೃಷಿ ಸಚಿವರಿಗೆ ಬೇಡಿಕೆ ಮಂಡನೆ ಮಾಡುತ್ತೇನೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಮಂಗಳವಾರ ಮುದ್ದೇಬಿಹಾಳ ತಾಲೂಕಿಗೆ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರವಾಸದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು,  ಇಲ್ಲಿ ಸುಮಾರು 1500 ಎಕರೆ ಜಮೀನು ಇದೆ. ಅಲ್ಲದೇ ಮುದ್ದೇಬಿಹಾಳ ಪಟ್ಟಣದಲ್ಲೂ 24 ಎಕರೆ ಜಮೀನು ಇದ್ದು ಜಾಗಕ್ಕೆ ಯಾವುದೇ ಕೊರತೆ ಇಲ್ಲಾ. ಆದ್ದರಿಂದ ಮುದ್ದೇಬಿಹಾಳ ತಾಲೂಕಿಗೆ ಕೃಷಿ ಸಂಬಂಧಿಸಿದ ಕೇಂದ್ರವನ್ನು ಒದಗಿಸಿದರೆ ಎಲ್ಲರಿಗೂ ಹೆಚ್ಚಿನ ಅನುಕೂಲವಾಗಲಿದೆ. ಇದರ ಬಗ್ಗೆ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿದೇರ್ಶಕ ಸೋಮನಗೌಡ ಪಾಟೀಲ, ಎಸ್.ಬಿ.ಚಲವಾದಿ, ಎಸ್.ಆರ್.ಕಟ್ಟಿಮನಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*