ನಿರಾಶ್ರಿತರಿಗೆ ಬಾಸಗೋಡ ಮೈದಾನದ ಬದಲಿ ಬೇರೆಡೆ ಜಾಗ; ಶಾಸಕಿ ರೂಪಾಲಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಅಂಕೋಲಾ: ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರಾಶ್ರಿತರಿಗೆ ಬಾಸಗೋಡ ಕ್ರೀಡಾಂಗಣದಲ್ಲಿ ಜಾಗ ನೀಡುವುದಿಲ್ಲ. ನಿರಾಶ್ರಿತರಿಗೆ ಬೇರೆಡೆ ಸೂಕ್ತ ಸ್ಥಳವನ್ನು ನೀಡಲಾಗುವುದು ಎಂದು ಬಾಸಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡುಬೇಣ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಸ್ಪಷ್ಟಪಡಿಸಿ ಜನತೆಯಲ್ಲಿ ಇರುವ ಗೊಂದಲಕ್ಕೆ ತೆರೆ ಎಳೆದರು.ಅಲಗೇರಿ ನಿರಾಶ್ರಿತರಿಗೆ ನೀಡಲೆಂದು ತಾಲೂಕಿನಲ್ಲಿ ಖಾಲಿ ಇರುವ ಸರ್ಕಾರಿ ಜಾಗದ ಮಾಹಿತಿ ನೀಡಿದಾಗ ಉಳಿದ ಕೆಲವು ಸ್ಥಳಗಳ ಜತೆ ನಡುಬೇಣದ ಜಾಗವನ್ನೂ ಸೂಚಿಸಲಾಗಿತ್ತು. ಇದು ಗೊಂದಲಕ್ಕೆ ಕಾರಣವಾಯಿತು. ಸ್ವಾತಂತ್ರ್ಯ ಹೋರಾಟಗಾರರ ನೆನೆಪಿಗೆ ಇರುವ ಈ ಮೈದಾನವನ್ನು ಕ್ರೀಡಾಂಗಣಕ್ಕೆ ಚ್ಯುತಿ ಬಾರದಂತೆ ಹೋರಾಟಗಾರರ ನೆನಪಿಗೆ ಅವಶ್ಯಕವಾದ ಯೋಜನೆಗಳನ್ನು ಹಮ್ಮಿಕೊಳ್ಳಲು ಬಳಸಲಾಗುವುದು. ನಿರಾಶ್ರಿತರಿಗೆ ಅವಶ್ಯಕವಾದ ಸೂಕ್ತ ಸ್ಥಳವನ್ನು ನೀಡಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಅಂಕೋಲಾವನ್ನು ಕರ್ನಾಟಕದ ಬಾರ್ಡೋಲಿ ಎಂದು ಕರೆಯಲಾಗುತ್ತದೆ. ಈ ಸ್ಥಳದಿಂದ ದೇಶಕ್ಕೆ ಅಪಾರವಾದವ ಕೊಡುಗೆಯನ್ನು ನೀಡಲಾಗಿದೆ. ನಡುಬೇಣದ ಕ್ರೀಡಾಂಗಣಕ್ಕೆ ಹಲವು ವರ್ಷದ ಇತಿಹಾಸವಿದೆ. ಪ್ರಸ್ತುತ ಈ ಕ್ರೀಡಾಂಗಣದ ಉಪಯೋಗವನ್ನು ಹಲವರು ಪಡೆಯುತ್ತಿದ್ದಾರೆ. ಈ ನಡುಬೇಣದ ಕ್ರೀಡಾಂಗಣದ ಪಕ್ಕದಲ್ಲಿರುವ ಸ್ಮಶಾನ ಅಭಿವೃದ್ಧಿಗೆ 5ಲಕ್ಷ ಹಾಗೂ ಅಲ್ಲಿಯ ರಸ್ತೆ ಅಭಿವೃದ್ಧಿಗೆ 10 ಲಕ್ಷ ನೀಡುವುದಾಗಿ ಭರವಸೆ ನೀಡಲಾಯಿತು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಂಕೋಲಾ ಮಂಡಲ ಅಧ್ಯಕ್ಷರು, ಜಿಲ್ಲಾ ವಕ್ತಾರರು, ಸ್ವಾತಂತ್ರ್ಯ ಹೋರಾಟಗಾರ ಸಮಿತಿ ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*