ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ; ಕೇಂದ್ರಕ್ಕೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಹಳಿಯಾಳ: ಲಾಕ್ ಡೌನ್ ಹಾಗೂ ಕರೋನಾ ಸಾಂಕ್ರಾಮಿಕ ರೋಗದ ತೀವ್ರತೆಯು ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಇದನ್ನೇ ನಂಬಿ ಜೀವನೋಪಾಯ ಕಂಡು ಕೊಂಡಿದ್ದವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಕಾರಣ ಈ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶಾಸಕ ಆರ್.ವಿ ದೇಶಪಾಂಡೆ ಪತ್ರ ಬರೆದು ವಿನಂತಿಸಿದ್ದಾರೆ.

ಕಳೆದ ಮಾರ್ಚ 2021 ರಿಂದ ಪ್ರವಾಸಿ ತಾಣಗಳು, ಹೋಂಸ್ಟೇಗಳು, ರೆಸಾಟ್ರ್ಗಳು ಮುಚ್ಚಿದ್ದು ಇದರಿಂದ ಪ್ರೇಕ್ಷಣೀಯ ಸ್ಥಳದಲ್ಲಿ ವಾಸಿಸುವ ಸ್ಥಳೀಯರು, ಪ್ರವಾಸೋದ್ಯಮಿಗಳು, ಅಂಗಡಿಕಾರರು, ಹಾಗೂ ಟ್ಯಾಕ್ಸಿ ಚಾಲಕರು ಉದ್ಯೋಗವಿಲ್ಲದೆ ನಿರ್ಗತಿಕರಾಗಿದ್ದಾರೆ. ಇದು ದೇಶದ ಹಾಗೂ ರಾಜ್ಯದ ಆರ್ಥಿಕತೆಗೂ ತುಂಬಲಾರದ ನಷ್ಟ. ಆದ್ದರಿಂದ ಪ್ರವಾಸೋದ್ಯ ಕ್ಷೇತ್ರಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*