ಹೊನ್ನಾವರ ತಹಸೀಲ್ದಾರ್ ವಿವೇಕ್ ಅವರಿಗೆ ಬೀಳ್ಕೊಡುಗೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಕಳೆದ ಎರಡು ವರ್ಷಗಳಿಂದ ಹೊನ್ನಾವರ ತಾಲೂಕಿನ ತಹಸೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿವೇಕ ಶೇಣ್ವಿಯವರು ವರ್ಗಾವಣೆಗೊಂಡಿರುವುದರಿಂದ ತಹಸೀಲ್ದಾರ್ ಕಛೇರಿಯಲ್ಲಿ ಬುಧವಾರ ಗೌರವಿಸಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಮೋಜಣಿ ಇಲಾಖೆಯ ಅಧಿಕಾರಿಯಾದ ಭುವನಸುಂದರ ರವರು ವಿವೇಕ್ ಶೇಣ್ವಿಯವರಿಗೆ ನೆನಪಿನ ಕಾಣಿಕೆ ನೀಡಿ ತಹಸೀಲ್ದಾರ ವಿವೇಕ್ ಶೇಣ್ವಿಯವರ ಕಾರ್ಯದಕ್ಷತೆ ಬಗ್ಗೆ ಮಾತನಾಡಿ ಶುಭ ಹಾರೈಸಿದರು.ಉಪಸ್ಥಿತರಿದ್ದ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ವಿವೇಕ್ ಶೇಣ್ವಿಯವರು ನಾನು ಅಣ್ಣ ತಮ್ಮನಂತೆ ಇದ್ದೇವು. ತಾಲೂಕಿನಲ್ಲಿ ಅನೇಕ ಇಲಾಖೆಯ ಕೆಲಸಗಳಿಗೆ ಒಟ್ಟಿಗೆ ಓಡಾಡಿದ್ದೇವೆ. ಉತ್ತಮ ಸಲಹೆ, ಮಾರ್ಗದರ್ಶನ ನೀಡಿದ್ದರು. ಅವರು ನನಗೆ ನೀಡಿದ ಸಹಕಾರ ಯಾವಾಗಲು ನೆನಪಲ್ಲಿ ಇರುತ್ತದೆ ಎಂದರು.

CHETAN KENDULI

ತಹಸೀಲ್ದಾರ್ ವಿವೇಕ್ ಶೇಣ್ವಿಯವರು ಮಾತನಾಡಿ ನಾನು ಹೊನ್ನಾವರಕ್ಕೆ ಬಂದು ಎರಡು ವರ್ಷ ಸೇವೆ ಸಲ್ಲಿಸಿದ್ದು, ತಾಲೂಕಿನ ಜನರು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು, ಉತ್ತಮ ಸಹಕಾರ ನೀಡಿದ್ದಾರೆ. ನೆರೆಹಾವಳಿ, ಬರ, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು, ಜನರು ಸಹಕಾರ ನೀಡಿದ್ದಾರೆ. ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ ಎನ್ನುವ ವಿಶ್ವಾಸ ವಿದೆ. ಮುಂದೆ ಬರುವ ತಹಸೀಲ್ದಾರಿಗೂ ಕೂಡ ಇದೇ ರೀತಿ ಸಹಕಾರ ನೀಡಿ ಎಂದರು.ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಆರ್. ಟಿ. ನಾಯ್ಕ, ಎಂ. ಜಿ. ನಾಯ್ಕ, ಸಿಪಿಐ ಶ್ರೀಧರ ಎಸ್. ಆರ್. ತಹಸೀಲ್ದಾರ ನಾಗರಾಜ ನಾಯ್ಕಡ ಮಾತನಾಡಿದರು.ಕಾರ್ಯಕ್ರಮದ ಸಂಯೋಜನೆ ಮತ್ತು ನಿರೂಪಣೆ ನಿರ್ವಹಣೆ ಮಾಡಿದ ಯುವ ಜನ ಸೇವಾಧಿಕಾರಿ ಸುದೀಶ ನಾಯ್ಕ ಮಾತನಾಡಿ ತಾಲೂಕಾ ದಂಢಾಧಿಕಾರಿಗಳಗಿದ್ದ ವಿವೇಕ್ ಶೇಣ್ವಿಯವರು ಆ ಹುದ್ದೆಗೆ ಘನತೆ, ಗೌರವ ತಂದುಕೊಟ್ಟ ಪ್ರಾಮಾಣಿಕ ಅಧಿಕಾರಿಯಾಗಿ, ಬಡಜನರಿಗೆ ಅಸಹಾಯಕರಿಗೆ, ನೆರವು ನೀಡಲು ಸದಾ ಮುಂದಿರುತ್ತಿದ್ದರು, ಇವರ ಅಧಿಕಾರದ ಅವಧಿ ತಾಲೂಕಿನ ಜನತೆಗೆ ಸದಾ ನೆನಪಲ್ಲಿ ಇರುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಸಹಾಯಕ ಉಪವಿಭಾಗಧಿ ಮಮತಾದೇವಿ ಜಿ. ಎಸ್ ಮಾತನಾಡಿ ವಿವೇಕ್ ಶೇಣ್ವಿಯವರ ಕಾರ್ಯದಕ್ಷತೆ, ತಾಳ್ಮೆಗೆ ಮೆಚ್ಚಲೇಬೇಕು, ಯಾವುದೇ ಕಠಿಣ ಸಮಸ್ಯೆ ಇದ್ದರು ತಾಳ್ಮೆಯಿಂದ ನಿಭಾಯಿಸುತ್ತಿದ್ದರು. ನಾನು ಅವರಿಂದ ತುಂಬಾ ಕಲಿತಿದ್ದೇನೆ. ಅವರ ಅಧಿಕಾರವಧಿಯಲ್ಲಿ ಯಾವ ಕೆಲಸಕ್ಕೂ ಒತ್ತಡಕ್ಕೆ ಒಳಗಾಗದೆ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ ಎಂದರು.

Be the first to comment

Leave a Reply

Your email address will not be published.


*