ಜಿಲ್ಲಾ ಸುದ್ದಿಗಳು
ಸಿರವಾರ
ವಿಧಾನ ಪರಿಷತ್ ಚುನಾ ವಣೆ ಹಿನ್ನೆಲೆಯಲ್ಲಿ ಸಿರವಾರದ ಮಾನವಿ ಕ್ರಾಸ್ ನಲ್ಲಿ ನಾಳೆ ನಡೆಯುವ ಸ್ವರಾಜ್ಯ ಸಮಾವೇಶಕ್ಕೆ ಭರ್ಜರಿ ಸಿದ್ದತೆ ಭರದಿಂದ ಸಾಗಿದೆ.ವಿಧಾನ ಪರಿಷತ್ ಚುನಾವಣೆ ಘೋಷಣೆ ಯಾಗಿದ್ದು, ಹೀಗಾಗಿ ಮಂಡಲದ ಎಲ್ಲ ಅಧ್ಯಕ್ಷರುಗಳು, ಜಿಲ್ಲೆಯ ಪದಾಧಿಕಾರಿಗಳು ಈ ಚುನಾವಣೆಯಲ್ಲಿ ಕೂಡಾ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಗೆಲವು ಸಾಧಿಸಬೇಕಾಗಿದೆ ಯಾರು ಅಭ್ಯರ್ಥಿ ಆಗುತ್ತಾರೆ ಎನ್ನುವುದು ಮುಖ್ಯವಲ್ಲ,ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಕೆಲಸ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ನಮ್ಮ ರಾಜ್ಯ ನಾಯಕರ, ಸಲಹೆ, ಮಾರ್ಗದರ್ಶನ ಕೊಡ್ತಾರೆ ನಾವೆಲ್ಲರೂ ಕೂಡಿಕೊಂಡು ಸಕ್ರೀಯರಾಗಿ ಸಮಾವೇಶದಲ್ಲಿ ತೊಡಗಬೇಕಿದೆ.
ಅದ್ದರಿಂದ ನಾಳೆ ನಡೆಯಲಿರುವ ಸಮಾವೇಶಕ್ಕೆ ಯಾವುದೇ ರೀತಿಯ ಕುಂದು ಕೊರತೆ ಬಾರದಂತೆ ಆಸನದ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಗಣ್ಯಾತಿ ಗಣ್ಯರಿಗೆ ಎಲ್ಲಾ ರೀತಿಯ ಸಕಲ ಸಿದ್ದತೆ ಪ್ರಾರಂಭಿಸಲಾಗಿದೆ ಎಂದು ಬಿಜೆಪಿ ಮಾನವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಯವರು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇತರರು ಇದ್ದರು.
Be the first to comment