ರಾಜ್ಯ ಸುದ್ದಿಗಳು
ಭಟ್ಕಳ
ತಾಲೂಕಿನ ಮೂಡ ಭಟ್ಕಳ ಟಾಪ್ ಲಾಡ್ಜ ಹಿಂಬಾಗದಲ್ಲಿ ಬುದುವಾರ ರಾತ್ರಿ ೧೦ ೪೫ ರ ಸುಮಾರಿಗೆ ಕಾನೂನು ಬಾಹಿರವಾಗಿ 19 ಜನರ ತಂಡವೋಂದು ಅಂದರ್ ಬಾಹರ್ ಇಸ್ಪಿಟ್ ಆಟಕ್ಕೆ ಹನವನ್ನು ಕಟ್ಟಿ ಜುಗಾರಿ ಆಟವನ್ನು ಆಡುತ್ತಿದ್ದ ಸಂದರ್ಬದಲ್ಲಿ ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ನಗರ ಠಾಣಾ ಪೋಲಿಸರ ತಂಡವು ಏಕಾಏಕಿ ದಾಳಿ ನಡೆಸಿ ಜುಗಾರಿ ಆಡುತ್ತಿದ್ದ 19 ಜನ ಜುಗಾರಿಕೊರರ ಸಹಿತ 9540 ರೂ ನಗದು ಹಾಗು ಜುಗಾರಿ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಪೋಲಿಸರ ಈ ಕ್ಷಿಪ್ರ ಕಾರ್ಯಾಚರಣೆಗೆ ತಾಲೂಕಿನಾಧ್ಯಂತ ಪ್ರಶಂಸೆ ವ್ಯೆಕ್ತವಾಗಿದೆ.
ತಾಲೂಕಿನಲ್ಲಿ ಅನದಿಕ್ರತ ಇಸ್ಪಟ್ ಅಡ್ಡಾಗಳು ಸದ್ಯ ಸಂಪೂರ್ಣ ಮುಚ್ಚಲ್ಪಟ್ಟಿದೆ ಕಾರಣ ಕೆಲವು ದಿನಗಳ ಹಿಂದೆ ನಮ್ಮ ಕರಾವಳಿ ಸಮಾಚಾರವು ಇಸ್ಪಟ್ ಅಡ್ಡಾದ ಸಂಪೂರ್ಣ ಚಿತ್ರಣವನ್ನೆ ಬಯಲಿಗೆಳೆದಿತ್ತು ಇದನ್ನೆ ಮಹಾ ಅಪರಾದ ಎನ್ನುವಂತೆ ಕೆಲವು ಪಟ್ಟಬಂದ್ರ ಹಿತಾಸಕ್ತಿಗಳು ನಮ್ಮ ವಾಹಿನಿಯ ಪ್ರದಾನ ಸಂಪಾದಕರ ಪ್ರಾಣವನ್ನೆ ತೆಗೆಯುವ ಉದ್ದೇಶದಿಂದ ದಾಳಿಯನ್ನು ನಡೆಸಿತ್ತು ಅದ್ರಷ್ಟವಶಾತ್ ನಮ್ಮ ವಾಹಿನಿಯ ಪ್ರದಾನ ಸಂಪಾದಕರು ಬದುಕಿಕೊಂಡರು ಈ ಬಗ್ಗೆ ಪೋಲಿಸ್ ಇಲಾಖೆ ದೂರನ್ನು ದಾಖಲಿಸಿಕೊಂಡು ಕೆಲವು ಆರೋಪಿಗಳನ್ನು ಬಂದಿಸಿ ವಿಚಾರಣೆಯನ್ನು ನಡೆಸಿತ್ತು ಈಗ ಆರೋಪಿಗಳು ಜಾಮೀನಿನ ಮೇಲೆ ಹೋರ ಬಂದಿದ್ದಾರೆ ಅಲ್ಲದೆ ತಲೆಯೆತ್ತಿರುವ ಎಲ್ಲಾ ಇಸ್ಪಿಟ್ ಅಡ್ಡಾಗಳನ್ನು ಸ್ವತಃ ಜಿಲ್ಲೆಯ ಪೋಲಿಸ್ ವರಿಷ್ಟಾಧಿಕಾರಿ ಐ ಪಿ ಎಸ್ ಡಾ ಸುಮಾ ಡಿ ಪೆನ್ನೆಕರ್ ಅವರು ಮುಂದೆ ನಿಂತು ಇಸ್ಪಿಟ್ ಅಡ್ಡಾಗಳನ್ನು ಸಂಪೂರ್ಣವಾಗಿ ಮುಚ್ಚಿಸಿದ್ದರು ಈ ಸಂಬಂದ ತಾಲೂಕಿನ ಎಷ್ಟೊ ಜೂಜುಕೊರರ ಸಂಸಾರ ನಿರಾಳತೆಯ ನಿಟ್ಟುಸಿರನ್ನು ಬಿಟ್ಟಿತ್ತು ಜುಗಾರಿ ಆಟಕ್ಕೆ ಹೊಗುತ್ತಿದ್ದ ಹಣ ಅವರ ಸಂಸಾರದ ಹೊಟ್ಟೆಯನ್ನು ತುಂಬಿಸುತ್ತಿತ್ತು ಆದರೆ ಇದು ಕೆಲವು ಪಟ್ಟ ಬಂದ್ರ ಹಿತಾಸಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಆದರೆ ಇದನ್ನೆಲ್ಲಾ ಮಿರಿಯು ಕೂಡ ಈಗಲೂ ಕೆಲವು ವ್ಯಕ್ತಿಗಳು ಅಲ್ಲಲ್ಲಿ ತಾಲೂಕಿನಲ್ಲಿ ಅಂದರ್ ಬಾಹರ್ ಗಳಂತ ಜುಜಾಟವನ್ನು ಈಗಲೂ ಆಡಿಸುತ್ತಿದ್ದಾರೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ತಾಲೂಕಿನ ಮೂಡ ಭಟ್ಕಳ ಟಾಪ್ ಲಾಡ್ಜ ಹಿಂಬಾಗದಲ್ಲಿ 19 ಜನರ ತಂಡವೋಂದು ಬುದುವಾರ ರಾತ್ರಿ ಸರಿಸುಮಾರು ೧೦, ೪೫ ರ ಸುಮಾರಿಗೆ ಅಂದರ್ ಬಾಹರ್ ಆಟವನ್ನು ಆಡುತ್ತಿರುವ ಖಚಿತ ಮಾಹಿತಿಯನ್ನು ಪಡೆದ ನಗರ ಪೋಲಿಸ್ ಠಾಣಾ ಪಿ ಎಸ್ ಐ ಹೆಚ್ ಬಿ ಕುಡಕುಂಟಿಯವರ ತಂದ ಎಕಾಏಕಿ ದಾಳಿ ನಡೆಸಿ ನಗದು ಹಣದ ಸಹಿತ 19 ಜನರ ಜುಗಾರಿಕೊರರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ
ತಾಲೂಕಿನಲ್ಲಿ ಇಸ್ಪಿಟ್ ಅಡ್ಡಾಗಳು ಹಾಗು ಮಟ್ಕಾ ಅಡ್ಡಾಗಳನ್ನು ಸಂಪೂರ್ಣ ಮುಚ್ಚಿಸಲಾಗಿದೆ ಆದರೆ ಈಗಿಗ ಕೆಲವೊಂದು ವ್ಯಕ್ತಿಗಳು ತಮ್ಮ ಹಳೆಯ ಚಾಳಿಯನ್ನು ಪುನಃ ಶುರುವಿಟ್ಟುಕೊಂಡಿದ್ದಾರೆ ಅಲ್ಲಿಲ್ಲಿ ಮೆಲ್ಲಮೆಲ್ಲನೆ ಇಸ್ಪಿಟ್ ಅಡ್ಡಾ ಮಟ್ಕಾ ಆಟಗಳನ್ನು ಪ್ರಾರಂಬಿಸಲು ಹುನ್ನಾರ ನಡೆಸುತ್ತಿದ್ದಾರೆ ಆದ್ದರಿಂದ ಪೋಲಿಸ್ ಇಲಾಖೆ ಈ ಬಗ್ಗೆ ಗಂಭಿರವಾಗಿ ಚಿಂತಿ ಬೇಕಾಗಿದೆ ಮೆಲ್ಲ ಮೆಲ್ಲನೆ ಚಿಗುರುತ್ತಿರುವ ಈ ಕಾನೂನು ಬಾಹಿರ ಚಟುವಟಿಕೆಗಳನ್ನು ಈ ಕೂಡಲೆ ಚಿವುಟಿ ಹಾಕುವ ಬಗ್ಗೆ ತಮ್ಮ ಇಲಾಖೆಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಡಾ ಸುಮಾ ಡಿ ಪೆನ್ನೆಕರ್ ಕಟ್ಟುನಿಟ್ಟನ ಆದೇಶವನ್ನು ನೀಡಬೇಕಾಗಿದೆ.
Be the first to comment