ನಾಯಿಗಳ ದಾಳಿಗೆ 4 ಕುರಿಗಳ ಸಾವು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಕೊಯಿರ ಗ್ರಾಮದಲ್ಲಿನ ರೈತ ಕೆ.ಎಸ್.ಮುನಿರಾಜು ಅವರ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ 4 ಕುರಿಗಳನ್ನು ತಡರಾತ್ರಿ ಸಮಯದಲ್ಲಿ ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.ಸುಮಾರು 70ಸಾವಿರ ರೂ.ಗಳಷ್ಟು ರೈತ ನಷ್ಟವನ್ನು ಅನುಭವಿಸಿದ್ದು, ಕಳೆದ ವಾರದ ಹಿಂದೆಯೂ ಸಹ ಇದೇ ರೀತಿ ಇಲ್ಲಿನ ಬೀದಿ ನಾಯಿಗಳು ರೈತ ಚಿಕ್ಕೆಗೌಡ ಅವರಿಗೆ ಸೇರಿದ ೩ ಮೇಕೆಗಳ ಮೇಲೆ ದಾಳಿ ನಡೆಸಿದ ಪರಿಣಾಮ ಮೇಕೆಗಳು ಸಹ ಸಾವನ್ನಪ್ಪಿವೆ. ರೈತರು ಏನು ಮಾಡಲು ಸಾಧ್ಯವಾಗದೆ ಸತ್ತ ಕುರಿಗಳನ್ನು, ಮೇಕೆಗಳನ್ನು ಮಣ್ಣು ಮಾಡಿದ್ದಾರೆ. 

CHETAN KENDULI

ನಾಯಿಗಳ ದಾಳಿಗೆ ಸ್ಥಳೀಯ ಕೋಳಿ ಫಾರಂಗಳೇ ಮುಖ್ಯ ಕಾರಣ, ಅಲ್ಲಿನ ಬೇಜಾವಾಬ್ದಾರಿತನ ಮತ್ತು ನಿರ್ವಹಣೆ ಕೊರತೆಯಿಂದಾಗಿ ಹಸಿದ ನಾಯಿಗಳು ಜಾನುವಾರುಗಳ ಮೇಲೆ ಎರಗುತ್ತಿವೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

 

Be the first to comment

Leave a Reply

Your email address will not be published.


*