ಮುದ್ದೇಬಿಹಾಳ 12:
ಅಭಿವೃದ್ಧಿಪಥದಲ್ಲಿ ಮುನ್ನುಗ್ಗುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬಾರಿ ಪ್ರಮಾಣದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯದಂಗಡಿಯವರು ತಮ್ಮ ಪರವಾಣಿಗೆಯ ಷರತ್ತುಗಳನ್ನು ಗಾಳಿಗೆ ತೂರಿ ಅಕ್ರಮ ದಂದೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜೂ.27 ರಿಂದ ಪ್ರಾರಂಭಗೊಂಡ ಧರಣಿ ಸತ್ಯಾಗ್ರಹಕ್ಕೆ ಮಂಗಳವಾರ ಜಿಲ್ಲಾಧಿಕಾರಿಗಳ ಆಡಳಿತದಿಂದ ಸ್ಪಂದನೆ ಸಿಕ್ಕಂತಾಗಿದೆ.
ಹೌದು, ಮುದ್ದೇಬಿಹಾಳ ಕ್ಷೇತ್ರದಲ್ಲಿ ಯಾರದೇ ಭಯವಿಲ್ಲದೇ ಎಗ್ಗಿಲ್ಲದೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಬಡ ಕುಟುಂಬಗಳು ಬೀದಿಗೆ ಬಂದಿವೆ. ಅಲ್ಲದೇ ಇತ್ತಿಚಿಗಷ್ಟೇ ಮುದ್ದೇಬಿಹಾಳ ಕ್ಷೇತ್ರದಲ್ಲಿ ಮದ್ಯಪಾನ ಮಾಡಿ ಕೆಲ ಕುಟುಂಬಗಳಲ್ಲಿ ಪ್ರಾಣಹಾನಿಯಂತಹ ಘಟನೆಗಳೂ ನಡೆದಿವೆ. ಇದರ ಬಗ್ಗೆ ಧ್ವನಿ ಎತ್ತಿರುವ ಸಾಮಾಜಿಕ ಹೋರಾಟಗಾರ ಮಂಜುನಾಥ ಕುಂದರಗಿ ಅವರು ಸ್ಥಳೀಯ ಅಭಕಾರಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮೌಖಿಕವಾಗಿ ಹಾಗೂ ಲಿಖಿತವಾಗಿ ದೂರುಗಳನ್ನು ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಬೇಸರಗೊಂಡ ಹೋರಾಟಗಾರ ಮಂಜುನಾಥ ಕುಂದರಗಿ ಅವರು ಜೂನ 27 ರಂದು ಸ್ಥಳೀಯ ತಹಸೀಲ್ದಾರ ಕಛೇರಿಯಲ್ಲಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದರು.
ಮದ್ಯದಂಗಡಿಯವರಿಗೆ ನಿಯಮವೇ ಇಲ್ಲಾ…!!!
ಮುದ್ದೇಬಿಹಾಳ ಕ್ಷೇತ್ರದಲ್ಲಿ ಸಾಕಷ್ಟು ಮದ್ಯದಂಗಡಿಗಳು ತಲೆ ಎತ್ತಿವೆ. ಆದರೆ ಸಿ.ಎಲ್.-2, ಸಿ.ಎಲ್-7, ಸಿ.ಎಲ್-9 ಸೇರಿಂದತೆ ಇನ್ನಿತರ ಸರಕಾರದಿಂದ ಮದ್ಯದ ಪರವಾಣಿಗೆ ಹೊಂದಿರುವ ಅಂಗಡಿ ಮಾಲಿಕರು ತಮಗೆ ಸರಕಾರದಿಂದ ಬಂದಂತಹ ಕಟ್ಟಳೆಗಳನ್ನು ಮೀರಿ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ಅಂಗಡಿ ಮಾಲಿಕರು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯ ಅಭಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಇದರ ಬಗ್ಗೆ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲಾ. ಇದರಿಂದ ಮದ್ಯದಂಗಡಿಯವರಿಗೆ ನಿಯಮವೇ ಇಲ್ಲದಂತಾಗಿದೆ ಎಂದು ಪ್ರಗತಿಪರ ಹೋರಾಟಗಾರರು ತಿಳಿಸಿದ್ದಾರೆ.
“ಮದ್ಯ ಮಾರಾಟದ ಬಗ್ಗೆ ಸರಕಾರ ಸಾಕಷ್ಟು ನಿಯಮಾವಳಿಗಳನ್ನು ಮಾಡಿದೆ. ಆದರೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಈ ಯಾವುದೇ ನಿಯಮವನ್ನು ಯಾವುದೇ ಮದ್ಯದಂಗಡಿಕಾರರೂ ಪಾಲಿಸುತ್ತಿಲ್ಲ. ಮದ್ಯದಂಗಡಿಯ ನಿಯಮಾವಳಿಗಳ ಬಗ್ಗೆ ಸಾಮಾನ್ಯರಿಗೆ ಗೊತ್ತಿಲ್ಲಾ. ಇದರ ಬಗ್ಗೆ ನಾನು ಪ್ರಶ್ನಿಸಲು ಹೋದರೆ ಅಭಕಾರಿ ಅಧಿಕಾರಿಗಳು ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲಾ. ಆದ್ದರಿಂದಲೇ ಮದ್ಯದಂಗಡಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿಸದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಕೇವಲ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಆದ್ದರಿಂದಲೇ ನಾನು ಅಭಕಾರಿ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಈ ಹೋರಾಟ ನಡೆಸಿದ್ದೆ. ಸದ್ಯಕ್ಕೆ ಉಪ ವಿಭಾಗಾಧಿಕಾರಿಗಳು ಲಿಖಿತ ಭರವಸೆ ನೀಡಿಸುವ ಬಗ್ಗೆ ತಿಳಿದ್ದು ಹೋರಾಟವನ್ನು ತಾತ್ಕಾಲಿಕ ನಿಲ್ಲಿಸುತ್ತಿದ್ದೇನೆ. ಲಿಖಿತ ಭರವಸೆಯಂತೆ ಅಧಿಕಾರಿಗಳು ನಡೆದುಕೊಳ್ಳದಿದ್ದರೆ ನನ್ನ ಹೋರಾಟ ಮತ್ತೇ ಮುಂದುವರೆಯುತ್ತದೆ. ಆದರೆ ಅಂದಿನ ಹೋರಾಟ ಬಹಳ ಕಷ್ಟಕರ ಹೋರಾಟವಾಗಿರುತ್ತದೆ.”
-ಮಂಜುನಾಥ ಕುಂದರಗಿ, ಸಾಮಾಜಿಕ ಹೋರಾಟಗಾರ, ಮುದ್ದೇಬಿಹಾಳ.
ಹೋರಾಟಗಾರರ ಬೇಡಿಕೆ ಈಡೇರಿಕೆಗೆ 2 ತಿಂಗಳ ಗಡವು:
ಜು.12 ರಂದು ಧರಣಿ ಸತ್ಯಾಗ್ರಹದಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪವಿಭಾಗಾಧಿಕಾರಿಗಳು ಹೋರಾಟಗಾರರನ್ನು ಮನವೋಲಿಸಲು ಮುಂದಾದಾಗ ಬಗ್ಗದ ಕಾರಣ ಹೋರಾಟಗಾರರ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲಾಗುವುದು. ಆದರೆ ಇದಕ್ಕಾಗಿ ಅಭಕಾರಿ ಇಲಾಖೆಗೆ 2 ತಿಂಗಳ ಗಡವು ನೀಡಬೇಕು ಎಂದು ತಿಳಿಸಿದರು.
ಲಿಖಿತ ಭರವಸೆಗೆ ಆಗ್ರಹ:
ಜಿಲ್ಲಾ ಉಪ ವಿಭಾಗಾಧಿಕಾರಿಗಳು ಹೋರಾಟಗಾರರಿಗೆ ಬೇಡಿಕೆ ಈಡೇರಿಸಲು ಸಮಯದ ಗಢವು ಕೇಳಿದಾಗ ಸ್ಪಂದಿಸಿದ ಹೋರಾಟಗಾರರು ಎಷ್ಟಾದರೂ ಸಮಯ ತೆಗೆದುಕೊಳ್ಳಿ ಆದರೆ ಭರವಸೆವನ್ನು ಲಿಖಿತ ಮೂಲಕವೇ ನೀಡಬೇಕು ಎಂದು ಹೇಳಿದಾಗ ಮೊದಲಿಗೆ ಹಿಂಜರಿದ ಅಧಿಕಾರಿಗಳು ನಂತರ ಹಲವು ವರ್ಷಗಳ ಹಿಂದೆ ಇದೇ ಅಭಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟ ಬಂದ ಮಾಡಿಸುವುದಾಗಿ ಲಿಖಿತ ಮೂಲಕವೇ ಭರವಸೆ ನೀಡಿದ್ದನ್ನು ಜಿಲ್ಲಾ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದಾಗ ಅಭಕಾರಿ ಜಿಲ್ಲಾ ಹಾಗೂ ಸ್ಥಳೀಯ ಅಭಕಾರಿ ಅಧಿಕಾರಿಗಳಿಗೆ ಅದೇ ರೀತಿಯಾಗಿ ಲಿಖಿತ ಭರವಸೆಯನ್ನು ನೀಡಿ ಎಂದು ಆದೇಶಿಸಿದರು.
Be the first to comment