ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ
ಪುಸ್ತಕ ಬರಹಗಾರರ(MBK) ಮತ್ತು ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(LCRP) ಸಖಿಯರ ಮಹಾ ಒಕ್ಕೂಟದಿಂದ ಪ್ರತಿಭಟನೆ
ಕರ್ನಾಟಕ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸಿ ದುಡಿಯುತ್ತಿರುವ ಮುಖ್ಯ ಪುಸ್ತಕ ಬರಹಗಾರರ (MBK) ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ(LCRP) ಮತ್ತು ಸಖಿಯರಿಗೆ ಸರಿಯಾದ ವೇತನ ನೀಡಿ ಸಂಘಗಳ ಆಧಾರದ ಮೇಲೆ ಗ್ರೇಡಿಂಗ್ ಮಾಡಿ ವೇತನ ನೀಡಲು ಆದೇಶ ಮಾಡಿರುವ ಸುತ್ತೋಲೆಯನ್ನು ತಕ್ಷಣ ಹಿಂಪಡೆದು ಸಮಾನ ವೇತನ ನೀಡಿ ನಂತರದ ಹಂತದಲ್ಲಿ ಗ್ರೇಡಿಂಗ್ ಮೂಲಕ ಅತೀ ಹೆಚ್ಚು ವ್ಯವಹರಿಸುವ ಮುಖ್ಯ ಪುಸ್ತಕ ಬರಹಗಾರರ (MBK) ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ(LCRP) ಗಳಿಗೆ ಪ್ರೋತ್ಸಾಸಧನ ನೀಡುವ ಮೂಲಕ ಉತ್ತೇಜಿಸಿ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ MBK) ಮತ್ತು ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(LCRP) ಸಖಿಯರ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರು ರುದ್ರಮ್ಮ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿ ಆಗಿದ್ರು.
ಬೇಡಿಕೆಗಳು ;
1. ಸಂಘಗಳ ಆಧಾರದ ಮೇಲೆ ಗ್ರೇಡೀಂಗ್ ಮಾಡಿ ವೇತನ ನೀಡಲು ಆದೇಶ ಮಾಡಿರುವ ಸುತ್ತೋಲೆಯನ್ನು ತಕ್ಷಣ ಹಿಂಪಡೆದು ಎಲ್ಲರಿಗೂ ಸಮಾನ ಗೌರವಧನ/ವೇತನ ನೀಡಲು ಕೋರಿದೆ.
2. ಗೌರವಧನ ಕನಿಷ್ಟ ಮಾಸಿಕ ವೇತನ ಮುಖ್ಯ ಪುಸ್ತಕ ಬರಹಗಾರರು(MBK) ಗಳಿಗೆ 20,000-00 ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ (LCRP) ಗಳಿಗೆ 15,000-00 ರೂಪಾಯಿ ನಿಗದಿಪಡಿಸಬೇಕಾಗಿ ಕೋರುತ್ತೇವೆ.
3. ವಾರ್ಷಿಕವಾಗಿ ಸೇವಾ ಹಿರಿತನದ ಮೇಲೆ ಶೇಕಡ 10% ರಷ್ಟು ವೇತನ ಹೆಚ್ಚಳ ಮಾಡುವುದು.
4. ಲೋಕಾಸ್ ತಂತ್ರಾಂಶದಲ್ಲಿ ವ್ಯವಹಾರದ ದತ್ತಾಂಶಗಳನ್ನು ಇಂಡೀಕರಿಸಲು ಉತ್ತಮ ಪೋಚರ್ ಹೊಂದಿರುವ ಕಂಪ್ಯೂಟರ್ ನೀಡುವುದು
ಕೃಷಿ ಸಖಿ ಹಾಗೂ ಪಶು ಸಖಿಯರ ಬೇಡಿಕೆಗಳು.
1. ಗೌರವಧನ ಕನಿಷ್ಟ ಮಾಸಿಕ ವೇತನ ಕೃಷಿ ಸಖಿ ಹಾಗೂ ಪಶು ಸಖಿಯರುಗಳಿಗೆ 15,000-00 ರೂಪಾಯಿ ನಿಗದಿಪಡಿಸಬೇಕು
Logo
Be the first to comment