ಹೆಚ್‌ಎಸ್‌ಆರ್ ಲೇಔಟ್ ನಲ್ಲಿ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಉಣ್ಣುವ ಸ್ಪರ್ಧೆ.

ಪ್ರಥಮ ಸ್ಥಾನ ಪಡೆದ ದಾವಣಗೆರೆಯ ಯೋಗೇಶ್, ವೈಟ್ ಪೀಲ್ಡ್ ನ ಸೌಮ್ಯ.

ಮುಂದಿನ ವರ್ಷದ ನವೆಂಬರ್ 16ರಂದು ನಾಟಿಕೋಳಿ,ಮುದ್ದೆ ಉಣ್ಣುವ ಸ್ಪರ್ದೆ;ಅನಿಲ್ ರೆಡ್ಡಿ.

ಬೆಂಗಳೂರು ನವೆಂಬರ್ 11; ನಗರದ ಹೆಚ್‌ಎಸ್‌ಆರ್ ಬಡಾವಣೆಯ ಪರಂಗಿಪಾಳ್ಯದ ಪಾರ್ಕ್ ನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಪ್ರಯುಕ್ತವಾಗಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ರಾಜ್ಯದ ವಿವಿಧ ಮೂಲೆಗಳಿಂದ ನೂರಕ್ಕೂ ಅಧಿಕ ಸ್ಪರ್ದಾಳುಗಳು ನಾಟಿ ಕೋಳಿ ಮತ್ತು ಮುದ್ದೆ ಉಣ್ಣುವ ಸ್ಪರ್ದೆಯಲ್ಲಿ ಭಾಗವಹಿಸಿ ಪೈಪೋಟಿ ನೀಡಿದರು. ದಾವಣಗೆರೆ,ರಾಮನಗರ, ಕುಣಿಗಲ್,ಮಾಲೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದರು.

ಪುರುಷರ ವಿಭಾಗದಲ್ಲಿ ದಾವಣಗೆರೆಯ ಯೋಗೇಶ್ ಹದಿಮೂರು ಮುದ್ದೆಗಳನ್ನು ತಿಂದು ಪ್ರಥಮ ಸ್ಥಾನ ಪಡೆದು ಬಹುಮಾನವಾಗಿ ಟಗರು ಪಡೆದರು,ಮಹಿಳೆಯರ ವಿಭಾಗದಲ್ಲಿ ವೈಟ್ ಪೀಲ್ಡ್ ನ ಸೌಮ್ಯ ಒಂಬತ್ತು ಮುದ್ದೆ ಸವಿದು ಪ್ರಥಮ ಸ್ಥಾನ ಪಡೆದು ಮೂವತ್ತೆರಡು ಇಂಚಿನ ಟಿವಿ ಬಹುಮಾನವಾಗಿ ಪಡೆದರು.

ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಹದಿಮೂರು ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದು ಕುರಿ ಪಟ್ಲಿ, ಕುಣಿಗಲ್ ನ ಲೋಕೆಶ್ 12ಮುದ್ದೆ ತಿಂದು ತೃತೀಯ ಸ್ಥಾನ ಪಡೆದು ಎರಡು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರೆ, ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ.ಎಂಟು ಮುದ್ದೆ ತಿಂದು ಮಿಕ್ಸರ್ ಗ್ಲೈಡರ್, ಸ್ಟಾರ್ ಹೋಟೆಲ್ ನ ಯಾವುದೇ ಕಾರ್ಯಕ್ರಮಗಳಲ್ಲಿ ಹಾಜರಾಗಿ ಊಟ ಸವಿಯುವ ಮಹಿಳೆಯೊಬ್ಬರು ಏಳು ಮುದ್ದೆ ತಿಂದು ತೃತೀಯ ಸ್ಥಾನ ಪಡೆದು ಕಿಚನ್ ಸೆಟ್ ಬಹುಮಾನವಾಗಿ ಪಡೆದರು.

ಕಾಂಗ್ರೆಸ್ ಮುಖಂಡ, ಚಲನ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ನಾರಾಯಣ ಗೌಡ,ವಾಸುದೇವ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು.

ಆಯೋಜಕ, ವಕೀಲ ಅನಿಲ್ ರೆಡ್ಡಿ ಮಾತನಾಡಿ, ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಮಂಡ್ಯ ಭಾಗದಲ್ಲಿ ಕಾಣುವಂತಾಗಿದ್ದು, ಆದರೆ ಇದೇ ಪ್ರಥಮ ಭಾರಿಗೆ ಬೆಂಗಳೂರಿನ ಹೆಚ್.ಎಸ್.ಆರ್.ಬಡಾವಣೆಯಲ್ಲಿ ಆಯೋಜನೆ ಮಾಡಲಾಗಿದೆ, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಮಾಡಲಾಗುವುದು, ಮುಂದಿನ ವರ್ಷದ ನವೆಂಬರ್ 16ರಂದು ನಾಟಿ ಕೋಳಿ ಮುದ್ದೆ ತಿನ್ನುವ ಸ್ಪರ್ದೆ ಆಯೋಜಿಸಲಾಗುವುದು, ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಆಗಮಿಸಿದ್ದರು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಆಯಾ ಭಾಗಗಳ ಖಾದ್ಯಗಳ ತಿನ್ನುವ ಸ್ಪರ್ಧೆ ಆಯೋಜನೆ ಮಾಡಲಾಗುವುದು ಎಂದು ಆಯೋಜಕ ಅನಿಲ್ ರೆಡ್ಡಿ ತಿಳಿಸಿದರು.

ಸ್ಪರ್ದೆ ವೀಕ್ಷಿಸಲು ಆಗಮಿಸಿದ್ದ ಸಾವರಾರು ಮಂದಿ ಮುದ್ದೆ,ನಾಟಿಕೋಳಿ ಊಟ, ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು.

Logo

Be the first to comment

Leave a Reply

Your email address will not be published.


*