ಸರಕಾರದ ಸುರಕ್ಷಿತ ಕ್ರಮಗಳ ಅನ್ವಯದಂತೆ ಜಗತ್ತಿನಲ್ಲಿ ಆಗು ಹೋಗುಗಳ ಸುದ್ದಿ ಸಮಾಚಾರಗಳನ್ನು ಪತ್ರಿಕೆ ಮೂಲಕ ಓದುಗರಿಗೆ ತಲುಪಿಸುವ ಕಾರ್ಯ ಮಹತ್ವದ್ದು. ಪತ್ರಿಕಾ ವಿತರಕರ ಸೇವೆ ಉತ್ತಮ ರೀತಿಯಲ್ಲಿ ಸಾಗಲಿ.
ಬಾಗಲಕೋಟೆ:(ಗುಡೂರ) ಹಗಲಿರುಳೆನ್ನದೆ, ಮಳೆ ಗಾಳಿ ಎನ್ನದೆ ತಂಪು ವಾತಾವರಣವಿದ್ದರು ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತ ಕೋವಿಡ್ ಸಂಕಷ್ಟದ ದಿನಗಳಲ್ಲಿ ಓದುಗರಿಗೆ ಪತ್ರಿಕೆ ತಲುಪಿಸುತಿದ್ದೆವೆ ಎಂದು ಗುಡೂರ(ಎಸ್.ಸಿ) ಗ್ರಾಮದ ಹಿರಿಯ ದಿನಪತ್ರಿಕೆ ಏಜೆಂಟರಾದ ದೊಡ್ಡಪ್ಪ ಬಿ ಕಳಸಾ ಹೇಳಿದರು.
ಗುಡೂರ (ಎಸ್ ಸಿ) ಗ್ರಾಮದಲ್ಲಿ ಬೆಳಗಿನ ಜಾವ ಆಯೋಜಿಸಿದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿದ ಅವರು ಹೆಚ್ಚುತ್ತಿರುವ ಮಹಾಮಾರಿ ಕೊರೊನ ಸೋಂಕಿನಿಂದ ರಕ್ಷಿಸಿಕೊಳ್ಳಲು ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿತ್ತು., ಇಂತಹ ಸಂದರ್ಭಗಳಲ್ಲಿಯೂ ಸಹ ನಾವು ಜೀವನ ಹಂಗು ತೊರೆದು ಪತ್ರಿಕಾ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡು ಮನೆ ಮನೆಗಳಿಗೆ ಪತ್ರಿಕೆ ತಲುಪಿಸಿದ್ದೆವೆ.
ಪತ್ರಿಕಾ ಬಂಡಲ್ ವಿತರಕರಾದ ಮಾರುತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ನಾಲ್ಕೈದು ದಿನ ಬಿಟ್ಟರೆ ವರ್ಷದುದ್ದಕ್ಕೂ ನಮ್ಮ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅಲ್ಲದೇ ಲಾಕ್ ಡೌನ್ ದಿಂದ ಸದ್ಯದ ಪರಿಸ್ಥಿತಿ ಏರುಪೇರಾಗಿರುವುದರಿಂದ ಕುಟುಂಬ ನಿರ್ವಹಣೆಗೆ ಹರಸಾಹಸ ಪಡುವಂತಾಗಿದೆ. ಆದ್ದರಿಂದ ಸರ್ಕಾರ ನಮಗೆ ನೇರವಾದಲ್ಲಿ ಬಹಳ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗುಡೂರ ಗ್ರಾಮದ ಪತ್ರಿಕಾ ವಿತರಕರಾದ ವೀರೇಶ ಕೆಲೂರ, ಕಿರಣ ಕಳಸಾ, ಸಂಗಮೇಶ ಕೆಲೂರ, ಸಚಿನ್ ವೀರಾಪುರ, ಗುರುನಾಥ ಹುದ್ದಾರ, ಬಸಯ್ಯ ಜಡಿಮಠ, ಮುರ್ತುಜ ನದಾಫ್ ಇತರರಿದ್ದರು.
Be the first to comment