ಆಕಾಶ್ ಆಸ್ಪತ್ರೆಯ ವೈದ್ಯರಿಗೆ ಆಡಳಿತ ಮಂಡಳಿಯಿಂದ ಅಭಿನಂದನೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿ 

CHETAN KENDULI

ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಹೂವಿನ ಸುರಿಮಳೆಆಕಾಶ್ ಆಸ್ಪತ್ರೆ ವತಿಯಿಂದ ೧೦ ದಿನಗಳ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕೊರೊನಾ ರೋಗಿಗಳ ಗುಣಪಡಿಸುವಲ್ಲಿ ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿ ಆಕಾಶ್ ಆಸ್ಪತ್ರೆ

 

ದೇವನಹಳ್ಳಿಯ ಪ್ರತಿಷ್ಠಿತ ಆಕಾಶ್ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ವೈದ್ಯ ದಿನದ ಅಂಗವಾಗಿ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದ ವೈದ್ಯ ದಿನವನ್ನು ಕೇಕ್ ಕತ್ತರಿಸುವುದರ ಮೂಲಕ ಆಚರಿಸಲಾಯಿತು.

 

ವೈದ್ಯರ ದಿನದಲ್ಲಿ ವೈದ್ಯರನ್ನು ಗುರ್ತಿಸುವ ಮತ್ತು ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಆಕಾಶ್ ಆಸ್ಪತ್ರೆಯ ಮಾಲೀಕ ಮುನಿರಾಜು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ತಂಡಗಳಿಗೆ ವಿಶೇಷವಾಗಿ ಹೂವಿನ ಸುರಿಮಳೆ ಸುರಿಯುವುದರ ಮೂಲಕ ಮತ್ತು ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಂಡಿದ್ದು ಗಮನಸೆಳೆಯಿತು.

 

ಆಕಾಶ್ ಆಸ್ಪತ್ರೆಯ ಮಾಲೀಕ ಮುನಿರಾಜು ಮಾತನಾಡಿ, ಎಲ್ಲರಿಗೂ ವೈದ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ನಂತರ ನೆರೆದಿದ್ದ ವೈದ್ಯರಿಗೆ ಗುಲಾಬಿ ಹೂ ನೀಡಿ ಪ್ರೋತ್ಸಾಹಿಸಿದರು. ಈ ವೇಳೆಯಲ್ಲಿ ಆಕಾಶ್ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಪುಷ್ಪ ಮುನಿರಾಜ್, ಅಮರ್‌ಗೌಡ, ವೈದ್ಯರಾದ ಡಾ.ಕೈಲಾಶ್, ಸಹ ವೈದ್ಯ ಡಾ.ಶ್ರೀನಿವಾಸ್ ಶಾಸ್ತ್ರಿ, ಹಿರಿಯ ವೈದ್ಯರು ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*