ಕರೊನಾ ಸಾಂಗ್ ಮೂಲಕ ಜಾಗೃತಿ ಮೂಡಿಸಿದ ಆರು ವರ್ಷದ ಬಾಲಕಿ

ವರದಿ: ಕಾಶಿನಾಥ ಬಿರಾದಾರ

ಜಿಲ್ಲಾ ಸುದ್ದಿಗಳು


ಮುದ್ದೇಬಿಹಾಳ:

CHETAN KENDULI

ಪುನೀತ್ ರಾಜ್‌ಕುಮಾರ ಹಾಡಿದ ತುಂಬಾ ನೋಡಬೇಡಿ ಲವ್ ಆಯತದೇ ಎಂಬ ಧಾಟಿಯಲ್ಲಿ ಕೊರೊನಾ ಸಾಂಗ್ ಮೂಲಕ ಆರು ವರ್ಷದ ಬಾಲಕಿಯೊಬ್ಬಳು ಹಾಡುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದ್ದಾಳೆ.
ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ ಬಸವರಾಜ ತಳವಾರ ಅವರ ಪುತ್ರಿ ಶ್ರೇಯಾ ಈ ಸಾಂಗ್ ಹಾಡಿದ್ದು ಅದಕ್ಕೆ ಅತ್ತೆ ಜಯಶ್ರೀ ಮನೆಯಲ್ಲಿಯೇ ಸಾಹಿತ್ಯ ರಚಿಸಿ ಹಾಡಿಸಿದ್ದಾರೆ.ನೃತ್ಯದ ಮೂಲಕ ಹಾಡಿರುವ ಈ ವಿಡಿಯೋ ಇದೀಗ ಎಲ್ಲರ ಮೆಚ್ಚುಗೆ ಕಾರಣವಾಗುದೆ.



ಕೈ ಕೊಡಬೇಡಿ ಟ್ರಾನ್ಸಫರ್ ಆಗ್ತದೆ ,ಹಗ್ ಮಾಡಬೇಡಿ ಬಂದೇ ಬಿಡ್ತದೆ ಕೊಕೊ ಕೊರೊನಾ.ಫಾರೀನ್‌ಗೆ ಹೋಗ್ತಾರೆ ವೈರಸ್ಸು ತರತಾರೆ ಇಷ್ಟೆಲ್ಲಾ ಆದ್ರೂ ಹೋಗೋದು ಯಾಕ್ರೋ ಎಂದು ಎಚ್ಚರಿಕೆಯನ್ನು ನೀಡಿದ್ದಾಳೆ.ವಿಶೇಷವಾಗಿ ಶಾಲೆ,ಕಾಲೇಜು,ಪಬ್ ಕ್ಲಬ್‌ಗಳನ್ನು ಹೆಸರಿಸಿರುವ ಬಾಲಕಿಯ ಸಾಂಗ್ ಇದೀಗ ಕೊರೊನಾ ಜಾಗೃತಿಯಾಗಿ ಬಳಕೆಯಾಗುವುದರಲ್ಲಿ ಸಂದೇಹವಿಲ್ಲ.

Be the first to comment

Leave a Reply

Your email address will not be published.


*