ರಾಜ್ಯ ಸುದ್ದಿಯನ್ನು
ದೊಡ್ಡಬಳ್ಳಾಪುರ
ಸತತ ಎಂಟು ದಿನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಎಂ ಎಸ್ ಜಿ ಪಿ ಘಟಕದ ವಿರುದ್ಧ ರೈತರ ಹೋರಾಟ ಸಾಗುತ್ತಿದ್ದು ದಿನದಿಂದ ದಿನಕ್ಕೆ ರೈತರ ಪರ ಬೆಂಬಲ ಸೂಚಿಸುವ ನಾಯಕರ ಪಟ್ಟಿ ಬೆಳೆಯುತ್ತಿದೆ ಎಂಟನೇ ದಿನವಾದ ಇಂದು ಜನತಾದಳ ಪಕ್ಷದ ರಾಜ್ಯ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು
ಕಳೆದ ಎಂಟು ದಿನಗಳಿಂದ ಎಂ ಎಸ್ ಜಿ ಪಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಸ್ಥಳೀಯ ರೈತರ ಹೋರಾಟ ಸಾಗುತ್ತಿದ್ದು ಹೋರಾಟ ಸ್ಥಳಕ್ಕೆ ಹಲವು ನಾಯಕರು ಭೇಟಿ ನೀಡಿ ತಮ್ಮ ನೈತಿಕ ಬೆಂಬಲವನ್ನು ಸೂಚಿಸುತ್ತಿದ್ದಾರೆ.
ಎಂಟನೇ ದಿನವಾದ ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರುನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರೈತರ ಹೋರಾಟ ನ್ಯಾಯ ಬದ್ಧವಾಗಿದೆ ಜೀವಕ್ಕಾಗಿ ಹೋರಾಡುತ್ತಿದ್ದಾರೆ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಮಾವತ್ತೂರು ಕೆರೆ ಹಾಳಾಗಿದ್ದು ಡಿಸೆಂಬರ್ 11ರಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲಾಗುವುದು ಮತ್ತು ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು
Be the first to comment