ಅರಣ್ಯವಾಸಿಗಳನ್ನ ಉಳಿಸಿ- ಜಾಥ ; ಭಟ್ಕಳ ತಾಲೂಕಾದ್ಯಂತ ಮಾರ್ಚ ೬ ರಿಂದ ೪ ದಿನದಲ್ಲಿ ೮೯ ಹಳ್ಳಿಗಳಿಗೆ ಸಂಚಾರ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

 

ಭಟ್ಕಳ

CHETAN KENDULI

ಅರಣ್ಯವಾಸಿಗಳ ಜಾಗೃತೆಯ ಅಂಗವಾಗಿ ಭಟ್ಕಳ ತಾಲೂಕಿನ ೨೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೮೯ ಹಳ್ಳಿಗಳಲ್ಲಿ ಮಾರ್ಚ ೬ ರಿಂದ ಮೂರು ದಿನಗಳ ಕಾಲ ಅರಣ್ಯವಾಸಿಗಳನ್ನ ಉಳಿಸಿ-ಜಾಥ ಭಟ್ಕಳ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಅರಣ್ಯವಾಸಿಗಳನ್ನ ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ ೩೦ ದಿನಗಳಲ್ಲಿ ೧೦೦೦ ಕೀ.ಮೀ ‘ಹೋರಾಟದ ವಾಹನ’ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಜಾಥವು ಕುಮಟ ತಾಲೂಕಿನಲ್ಲಿ ಉದ್ಘಾಟನೆಗೊಂಡು ಗ್ರಾಮೀಣ ಭಾಗದ ಅರಣ್ಯವಾಸಿಗಳಿಗೆ ಜಾಗೃತ ಮೂಡಿಸುವ ಕಾರ್ಯಕ್ರಮ ಜರಗುತ್ತಿದೆ.

   ಅರಣ್ಯವಾಸಿಗಳ ಕಾನೂನು ಅಂಶ, ಭೂಮಿ ಹಕ್ಕಿಗೆ ಸಂಬAಧಿಸಿದ ಪ್ರಕ್ರೀಯೆ, ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ಹಳ್ಳಿಗಳಿಗೆ ಭೇಟ್ಟಿಕೊಟ್ಟಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಮಾಹಿತಿ ನೀಡಲಾಗುವುದು, ಆಸಕ್ತ ಅರಣ್ಯವಾಸಿಗಳು ಹೇಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಉದ್ಘಾಟನೆ:   ಭಟ್ಕಳ ತಾಲೂಕಿನಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಜಾಥವನ್ನು ಬೆಳಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಮೊದ್ಲು ಶಾಲೆಯ ಹತ್ತಿರ ಮಾರ್ಚ, ೬ ಮುಂಜಾನೆ ೯:೦೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷ ರವೀಂದ್ರö ನಾಯ್ಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*