ಜಿಲ್ಲಾ ಸುದ್ದಿಗಳು
ಮಸ್ಕಿ
ಮಸ್ಕಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು, ಮತದಾರರು ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ಕಾಂಗ್ರೇಸ್ ಡಿಜಿಟಲ್ ಸದಸ್ಯತ್ವ ನೋಂದಣಿಯನ್ನು ಪಡೆಯಿರಿ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ ತಿಳಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆದೇಶದ ಮೇರೆಗೆ ಮಸ್ಕಿ ತಾಲೂಕಿನಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ಮಸ್ಕಿ ಕ್ಷೇತ್ರದ ಜನರು ನೋಂದಣಿಗೆ ಮುಂದಾಗಬೇಕು, ದೇಶದಲ್ಲಿ ಭವ್ಯ ಇತಿಹಾಸ ಇರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷವನ್ನು ಸಂಘಟಸೋಣ, ಇಂದು ದೇಶವೂ ಎಲ್ಲಾ ರಂಗದಲ್ಲಿ ಅಭಿವೃದ್ಧಿಯಾಗಿದ್ದು ಇದಕ್ಕೆ ಹಿಂದಿನ ಕಾಂಗ್ರೇಸ್ ಸರ್ಕಾರದ ಆಡಳಿತ ಸಾಕ್ಷಿಯಾಗಿವೆ. ಪ್ರತಿಯೊಬ್ಬ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನ ಭೇಟಿ ಮಾಡಿ ಡಿಜಿಟಲ್ ಸದಸ್ಯತ್ವ ಪಡೆಯಬೇಕು. ಮನೆ ಮನೆಗೆ ಬಂದು ಕಾರ್ಯಕರ್ತರ ಸದಸ್ಯತ್ವ ಮಾಡುತ್ತೇವೆ ಎಂದರು.ಕ್ಷೇತ್ರದಲ್ಲಿ ಅಭಿಯಾನ ವ್ಯಾಪಕವಾಗಿ ಸಾಗಿದ್ದು ಜನರು ನೋಂದಣಿ ಮಾಡಿಸುವಲ್ಲಿ ಭಾಗಿಯಾಗಬೇಕಿದೆ. ಡಿಜಿಟಲ್ ಸದಸ್ಯತ್ವ ನೋಂದಣಿಗೆ, ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಶ್ರಮಿಸಬೇಕು ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ ಚಿಗರಿ ಯವರು ಕರೆ ನೀಡಿದರು.
Be the first to comment