ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 31 ರಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯ ಸಂದರ್ಭದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಳವಾಗಿದ್ದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಕಂಗಾಲಾಗಿದ್ದಾರೆ.
ಮಾರಾಟ ಮಾಡಲು ತಂದಿದ್ದ ವಸ್ತುಗಳನ್ನು ದನಗಳು ತಿನ್ನುವುದರ ಜೋತೆಗೆ ಬೇಕಾ ಬಿಟ್ಟಿಯಾಗಿ ಓಡಾಟ ಮಾಡುವುದರಿಂದ, ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಿಡಾಡಿ ದನಗಳ ಹಾವಳಿ ತಪ್ಪಿಸಬೇಕಾಗಿದೆ ಎಂದರು.
ಸಂಬಂಧಿಸಿದ ನಗರಸಭಾ ಸದಸ್ಯರು, ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಬಿಡಾಡಿ ದನಗಳ ಹಾವಳಿ ತಪ್ಪಸಬೇಕಾಗಿದೆ ಎಂದು ವ್ಯಾಪಾರಸ್ಥರು,ಗ್ರಾಹಕರು ಹಾಗೂ ಸ್ಥಳಿಯರು ವಿನಂತಿಮಾಡಿಕೊಂಡಿದ್ದಾರೆ.
Be the first to comment