ಜಿಲ್ಲಾ ಸುದ್ದಿಗಳು
ಶಿರಸಿ
ಹಾಲಳ್ಳ ಸುತ್ತಲಿನ ಪರಿಸರ ಸೇರಿದಂತೆ ನೀರಿನ ಮೂಲವನ್ನೇ ಹಾಳು ಮಾಡಿ, ಜನತೆಯ ಆರೋಗ್ಯ ಕೆಡಿಸುತ್ತಿರುವ ಕೋಳಿಫಾರಂನ್ನು ತೆರವು ಗೊಳಿಸುವಂತೆ ಒತ್ತಾಯಿಸಿ ಸ್ಥಳಿಯರು ಪ್ರತಿಭಟನೆ ನಡೆಸಿದರು.ನಗರದ ಮಂಜವಳ್ಳಿಯಲ್ಲಿರುವ ಕೋಳಿಫಾರಮ್ ಎದುರು ಸ್ಥಳೀಯ ನಾಗರಿಕರು ಬ್ರಹತ್ ಪ್ರತಿಭಟನೆ ನಡೆಸಿದರು.ಶಿರಸಿ ಹುಲೇಕಲ್ ರಸ್ತೆ ತಡೆದ ನಾಗರಿಕರು ತಕ್ಷಣ ಕೋಳಿಫಾರಮ್ ತೆರವುಗೊಳಿಸಬೇಕು. ಕೋಳಿಫಾರ್ಮ್ ಮಾಲೀಕರು ಸ್ಥಳಕ್ಕೆ ಬಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ಆಗ್ರಹಿಸಿದರು.
ಕೋಳಿಫಾರ್ಮ್ ನಲ್ಲಿ 57000 ಕ್ಕೂ ಹೆಚ್ಚು ಕೋಳಿಗಳಿವೆ. ಇವುಗಳ ತ್ಯಾಜ್ಯ ಚರಂಡಿ ಸೇರುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ನೀರಿನೊಂದಿಗೆ ಕೋಳಿ ತ್ಯಾಜ್ಯ ಹತ್ತಿರದ ಕೆಂಗ್ರೆ ಹೊಳೆ ಸೇರುತ್ತಿದೆ. ಧುರಂತ ಎಂದರೆ ಅಲ್ಲಿನ ನೀರನ್ನು ನಗರಕ್ಕೆ ಕುಡಿಯಲೆಂದು ಪೂರೈಸಲಾಗುತ್ತಿದೆ. ಅಲ್ಲದೇ ಹಾಲಳ್ಳ ಶಾಲೆ ಬಾವಿ ನೀರಿಗೂ ತ್ಯಾಜ್ಯ ಸೇರುತ್ತಿದೆ. ಹೀಗಾಗಿ ಕಲುಷಿತ ನೀರನ್ನು ನಾವೆಲ್ಲ ಕುಡಿಯುವಂತಾಗಿದೆ ಎಂದು ಆರಂಕ ವ್ಯಕ್ತಪಡಿಸಿದರು.
ಮುಖ್ಯವಾಗಿ ಕೋಳಿ ತ್ಯಾಜ್ಯದಿಂದ ಧುರ್ವಾಸನೆ ಆವರಿಸಿಕೊಂಡು ಸುತ್ತಮುತ್ತಲಿನ ಜನ ವಾಸಿಸಲು ಕಷ್ಟಸಾಧ್ಯವಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ 32 ವರ್ಷದ ಹಿಂದೆ ಆರಂಭವಾದ ಫಾರ್ಮ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರಿಂದಾಗುವ ಸಮಸ್ಯೆ ಕುರಿತು ಸಾಕಷ್ಟು ಮನವಿ ಮಾಡಿದರೂ ಮಾಲೀಕರು ಫಾರ್ಮ್ ತೆರವಿಗೆ ಮುಂದಾಗಿಲ್ಲ. ಈಗ ನಗರ ಪ್ರದೇಶ ವಿಸ್ತರಣೆಯಾವಿ ಜನವಸತಿ ಹೆಚ್ಚಿದೆ. ಹೀಗಾಗಿ ನಾಗರಿಕರ ಆರೋಗ್ಯದ ಹಿತ ದೃಷ್ಟಿಯಿಂದ ಫಾರ್ಮ್ ತೆರವು ಗೊಳಿಸಬೇಕೆಂದು ಆಗ್ರಹಿಸಿದರು.
ಫಾರ್ಮ್ ತೆರವು ಆಗುವ ವರೆಗೂ ನಮ್ಮ ಹೋರಾಟ ಮುಂದು ವರಿಯಲಿದೆ. ಇದು ನಮ್ಮ ಸಾಂಕೇತಿಕ ಹೋರಾಟ. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆ ವೇಳೆ ರಸ್ತೆಯ ಇಕ್ಕೆಲಗಳಲ್ಲೂ ವಾಹನ ದಟ್ಟಣೆ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಸ್ಥಳಕ್ಕಾಗಮಿಸಿದ ಪೊಲೀಸ್ ಹಾಗೂ ತಾಲೂಕು ಆಡಳಿತಾಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದಬಳಿಕಪ್ರತಿಭಟನೆಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಮನು ಹೆಗಡೆ, ಭಾಸ್ಕರ ಹೆಗಡೆ, ಅಂಜನಾ ಭಟ್, ಸಹನಾ ಹೆಗಡೆ, ನಾಗರಾಜ ಹೆಗಡೆ ಹಾಲಳ್ಳ ಸೇರಿದಂತೆ ಹಾಲಳ್ಳ, ಹುತ್ಗಾರ, ಮಂಜವಳ್ಳಿ ಭಾಗದ ನೂರಾರು ನಾಗರಿಕರು ಭಾಗವಹಿಸಿದ್ದರು.
Be the first to comment