ರಾಜ್ಯ ಸುದ್ದಿಗಳು
ಬೆಂಗಳೂರು
ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ನಾಲ್ಕು ದಿನದಿಂದ ಡೆತ್ನೋಟ್ ಬರೆದಿದ್ದು, ಸೆಪ್ಟೆಂಬರ್ 27ರಂದು ಡೆತ್ನೋಟ್ ಬರೆಯಲು ಶುರು ಮಾಡಿ ಇಂದು ಕೊನೆಯ ಪುಟ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೊಡಗಿನ ಕುಶಾಲನಗರ ಮೂಲದ ಸವಿ ಮಾದಪ್ಪ ಅವರು ಸೌಜನ್ಯ ಎಂದೇ ಹೆಸರಾಗಿದ್ದರು. 25 ವರ್ಷದ ನಟಿ ಸೌಜನ್ಯ, ಬೆಂಗಳೂರು ಹೊರವಲಯದ ದೊಡ್ಡಬೆಲೆ ಸಮೀಪದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಇವರು ಚೌಕಟ್ಟು ಮತ್ತು ಫನ್ ಎಂಬ 2 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇಂದು ಅವರು ತಮ್ಮ ಬಾಯ್ ಫ್ರೆಂಡ್ ವಿವೇಕ್ಗೆ ಊಟ ತರಲು ಕಳುಹಿಸಿ, ಆತ ವಾಪಸ್ ಬರುವುದರ ಒಳಗೆ ಸೂಸೈಡ್ ಮಾಡಿಕೊಂಡಿದ್ದಾರೆ.
ನಾಲ್ಕು ದಿನದಿಂದ ಡೆತ್ನೋಟ್ ಬರೆದಿದ್ದ ನಟಿ ಸೌಜನ್ಯ, ಸೆಪ್ಟೆಂಬರ್ 27ರಂದು ಡೆತ್ನೋಟ್ ಬರೆಯಲು ಶುರು ಮಾಡಿದ್ದು, ಡೆತ್ ನೋಟ್ನಲ್ಲಿ ನಾನು ಈ ರೀತಿ ಮಾಡಿಕೊಳ್ಳುತ್ತಿರುವುದಕ್ಕೆ ಕ್ಷಮೆ ಕೇಳುತ್ತೇನೆ, ಪಪ್ಪಾ…ಮಮ್ಮಿ ನನ್ನನ್ನು ಕ್ಷಮಿಸಿ ಬಿಡಿ. ನಾನು ಇವತ್ತು ಬರುತ್ತೀನಿ ಅಂತಾ ನಿಮಗೆ ಹೇಳಿದ್ದೆ,
ಆದ್ರೆ, ಮನೆಗೆ ಬರೋಕ್ಕೆ ಸಾಧ್ಯವಾಗಿಲ್ಲ. ನನಗೆ ತುಂಬಾ ಜವಬ್ದಾರಿ ಇದ್ದವು, ಅದು ಯಾವುದನ್ನೂ ಈಡೇರಿಸಲು ಆಗಿಲ್ಲ. ಎಲ್ಲವನ್ನೂ ಅರ್ಧದಲ್ಲೇ ಬಿಟ್ಟು ಹೋಗ್ತಿರೋದಕ್ಕೆ ನೋವಾಗಿದೆ ಎಂದು 27ರಂದು ಡೆತ್ನೋಟ್ ಬರೆಯಲು ಶುರು ಮಾಡಿದ್ದ ನಟಿ, ಸೆಪ್ಟೆಂಬರ್ 28, 29 ಮತ್ತು 30ರಂದು ಒಟ್ಟು ನಾಲ್ಕು ಪುಟಗಳ ಡೆತ್ ನೋಟ್ ಬರೆದಿದ್ದಾರೆ. ಡೆಟ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ
Be the first to comment