ತಾಪಂ ವತಿಯಿಂದ ಸ್ವಚ್ಛತಾ ಸೇವಾ ರಥಯಾತ್ರೆಗೆ ಚಾಲನೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಆಜಾದ್ ಕಾ ಅಮೃತ ಮೊಹೊತ್ಸವಾ ಕಾರ್ಯಕ್ರಮದ ಅಂಗವಾಗಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಪಂನ ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಸ್ವಚ್ಛತಾ ಸೇವಾ ರಥಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ತಾಪಂ ಇಒ ಎಚ್.ಡಿ.ವಸಂತಕುಮಾರ್ ತಿಳಿಸಿದರು.

CHETAN KENDULI

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಸ್ವಚ್ಛತಾ ಸೇವಾ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಹಳ್ಳಿ ಹಳ್ಳಿಗೆ ಮತ್ತು ಪ್ರತಿ ಗ್ರಾಪಂಗೆ ಈ ವಾಹನವನ್ನು ಕಳುಹಿಸಿಕೊಟ್ಟು ಹಳ್ಳಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಹಾಗೂ ಆರೋಗ್ಯ ಕಾಪಾಡುವ ಉದ್ದೇಶವನ್ನು ಹೊಂದಲಾಗಿದೆ. ಜನ ಸಂದಣಿ ಸೇರುವ ಜಾಗಗಳಲ್ಲಿ ಪ್ರತಿ ದಿನ ಎರಡು ಪಂಚಾಯಿತಿಗಳಲ್ಲಿ ಈ ರಥಯಾತ್ರೆ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ತಾಪಂ ಆಡಳಿತಾಧಿಕಾರಿ ಬಿ.ರಮೇಶ್‌ರೆಡ್ಡಿ, ಸಿಬ್ಬಂದಿ, ತಾಲೂಕಿನ ವ್ಯವಸ್ಥಾಪಕಿ ನರ್ಮದಾ ಹಾಗೂ ಸಿಬ್ಬಂದಿ, ಅನುಷ್ಟಾನ ಇಲಾಖೆಯ ಸಿಬ್ಬಂದಿ, ಐಇಸಿ ಸಂಯೊಜಕರು ಇದ್ದರು.  

ವರದಿ: ಹೈದರ್‌ಸಾಬ್, ಕುಂದಾಣ

Be the first to comment

Leave a Reply

Your email address will not be published.


*