ತಾಲೂಕ ಆಡಳಿತದ ವತಿಯಿಂದ 152 ನೇ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಣೆ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

‌ ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಎಲ್ಲಾ ಕಛೇರಿಗಳಲ್ಲಿ ಮಹಾತ್ಮ ಗಾಂಧೀಜಿ ರವರ 152 ನೇ ಜಯತಿಯನ್ನು ಆಚರಿಸಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದ ಬಸವ ವೃತ್ತದಿಂದ ಹಳೇ ಬಸ್ ನಿಲ್ದಾಣದ ಅಂಬೇಡ್ಕರ ವೃತ್ತದ ವರೆಗೆ ಲಸಿಕಾ ಮಹಾಮೇಳ ಜಾಗೃತ ಜಾಥಾವು ತಾಲೂಕ ಆಡಳಿತದ ವತಿಯಿಂದ ಯಶಸ್ವಿಯಾಗಿ ಜರುಗಿತು. ಕ್ಷೇತ್ರದ ಶಾಸಕರಾದ ಬಸನಗೌಡ ತುರುವಿಹಾಳ, ತಾಲೂಕ ದಂಡಾಧಿಕಾರಿಗಳ ಆದಂತಹ ಆರ್ ಕವಿತಾ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್, ಪುರಸಭೆ ಮುಖ್ಯಾಧಿಕಾರಿಯಾದ ಹನುಮಂತಮ್ಮ ನಾಯಕ ಸೇರಿದಂತೆ ತಾಲೂಕ ಆಡಳಿತವು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೋವಿಡ್ 19 ವೈರಸ್ ಅಲೆಯು ವಿಶ್ವದಾದ್ಯಂತ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ಈ ರೋಗವನ್ನು ಹೋಗಲಾಡಿಸಲು ಲಸಿಕಾ ಮಹಾಮೇಳ ಜಾಗೃತಿ ಜಾತಿ ಜಾಥಾ ಹಮ್ಮಿಕೊಳ್ಳುವುದು ಅಷ್ಟೇ ಅಲ್ಲದೆ ತಾಲೂಕನ್ನು ಕರೋನಾ ಮುಕ್ತವನ್ನಾಗಿ ಮಾಡುವ ಪ್ರಯತ್ನ ನಮ್ಮೆಲ್ಲರ ಕರ್ತವ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

CHETAN KENDULI

ನಂತರ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂದಾಯ ಇಲಾಖೆ , ತಾಲೂಕು ಪಂಚಾಯಿತಿ ಮತ್ತು ಪುರಸಭೆ ಈ ಮೂರು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಾವರೆಲ್ಲಾ ಸೇರಿ ವಿಶ್ವದ ಐತಿಹಾಸಿಕ ಸ್ಥಳಗಳಲ್ಲಿ ಒಂದಾದಂತಹ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿನ ಸಾಮ್ರಾಟ ಚಕ್ರವರ್ತಿ ಅಶೋಕ ಶಿಲಾಶಾಸನ ಸ್ಥಳದಲ್ಲಿನ ಜಂಗಲ್ ಕಟ್ಟಿಂಗ್ ಮತ್ತು ಸುತ್ತಮುತ್ತಲಿನ ತ್ಯಾಜ್ಯವಸ್ತುಗಳನ್ನು ತೆಗೆದು ಹಾಕಿ, ಶಾಸನದ ಸುತ್ತಮುತ್ತಲು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಹಾಗೆಯೇ ತಾಲೂಕ ಆಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಳದಿ ಮತ್ತು ಕೆಂಪು ಬಣ್ಣದ ಟಿ-ಶರ್ಟ್ ಅನ್ನು ಧರಿಸಿದ್ದು ವಿಶೇಷವೆನಿಸಿತು.

 ಈ ಸಂದರ್ಭದಲ್ಲಿ ಶಾಸಕ ಬಸನಗೌಡ ತುರುವಿಹಾಳ, ಆರ್.ಕವಿತಾ ತಾಲೂಕ ದಂಡಾಧಿಕಾರಿ, ಸೈಯ್ಯದ್ ಅಖ್ತರ್ ಅಲಿ ಶಿರಸ್ತೇದಾರರು ಕಂದಾಯ ಇಲಾಖೆ, ಬಾಬು ರಾಥೋಡ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಹನುಮಂತಮ್ಮ ನಾಯಕ ಪುರಸಭೆಯ ಮುಖ್ಯಾಧಿಕಾರಿ, ಸಿದ್ದರಾಮ ಬಿದರಾಣಿ ಪಿಎಸ್ಐ ಮಸ್ಕಿ ಪೋಲೀಸ್ ಠಾಣೆ ಹಾಗೂ ತಾಲೂಕ ಆಡಳಿತದ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

 

Be the first to comment

Leave a Reply

Your email address will not be published.


*