ಜಿಲ್ಲಾ ಸುದ್ದಿಗಳು
ಹೊನ್ನಾವರ
ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿಯ ಕೌಟುಂಬಿಕ ಜಗಳದಿಂದ ಬೆಸತ್ತು ಇಬ್ಬರು ಅವಳಿ ಜವಳಿ ಅಕ್ಕ ತಂಗಿಯರು ವಿಷಸೇವಿಸಿ ಸಾವಿಗೆ ಶರಣಾದ ಘಟನೆ ತಾಲೂಕಿನ ಇಡಗುಂಜಿ ಕುಳಿಮನೆಯಲ್ಲಿ ನಡೆದಿದೆ. ಸೋಮವಾರದಂದು ಇವರು ವಿಷ ಸೇವಿಸಿದ್ದರು, ನಂತರ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದಾರೆ.
ಮೃತಪಟ್ಟ ಸೋದರಿಯರು ಮೇಘಶ್ರೀ ಸುಬ್ಬಯ್ಯ ನಾಯ್ಕ ಮತ್ತು ಭಾಗ್ಯಶ್ರೀ ಸುಬ್ಬಯ್ಯ ನಾಯ್ಕ ಇವರು ಅವಳಿ-ಜವಳಿ ಸೋದರಿಯರು ಎಂದು ಹೇಳಲಾಗುತ್ತಿದೆ. ನಿಖರ ಕಾರಣ ತಿಳಿದು ಬಂದಿಲ್ಲ. ಮಂಕಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment