ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನ ನಗರ ಭಾಗದಲ್ಲಿನ ನಗರಸಭೆಯ ನೂತನ ಕಟ್ಟಡವು ಇಂದು ಬೆಳಗ್ಗೆ 10 ಘಂಟೆಗೆ ಉದ್ಘಾಟನೆಗೊಳ್ಳಬೇಕ್ಕಿತ್ತು ಆದರೆ ಸಚಿವರ ಬರುವಿಕೆಗಾಗಿ ಸರ್ವಸದಸ್ಯರು ಕಾದು ಕುಳಿತಿದ್ದಾರೆ ದೊಡ್ಡಬಳ್ಳಾಪುರ ನಗರಸಭೆಯ ನೂತನ ಕಟ್ಟಡವನ್ನು ಪೌರಾಡಳಿತ ಸಚಿವರಾದಂತಹ ಎಂ ಟಿ ಬಿ . ನಾಗರಾಜು ಉದ್ಘಾಟಿಸಬೇಕಿತ್ತುಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಸುಧಾಕರ್ ಕೂಡ ಭಾಗವಹಿಸಬೇಕ್ಕಿತು. ಆದರೆ ಕಾರಣಾಂತರಗಳಿಂದ ಸಚಿವರು ಇನ್ನೂ ಬಾರದ ಕಾರಣ ಉದ್ಘಾಟನೆ ಇನ್ನೂ ಕನಸಾಗಿಯೇ ಉಳಿದಿದೆ.
ಉಸ್ತುವಾರಿ ಸಚಿವರುಗಳ ನಡುವಿನ ಶೀತಲ ಸಮರ ಇದಕ್ಕೆ ಕಾರಣ ಎಂದು ಕೆಲವರು ಅಭಿಪ್ರಾಯ ನೂತನ ಕಟ್ಟಡ ಉದ್ಘಾಟನೆ ಮಾಡುವಲ್ಲಿ ಇದೆಂಥ ರಾಜಕೀಯ ಅನ್ನೋವುದು ಕೆಲವರ ಮಾತು …. ಮಾತು ಏನೇ ಇರಲಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಬೇಕಿದ್ದ ಸಚಿವರು ಬಾರದಿರಲು ಕಾರಣ ಏನೆಂಬುದೇ ಎಲ್ಲಾರ ಪ್ರಶ್ನೆಯಾಗಿ ಉಳಿದಿದೆ …
Be the first to comment