ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದಿಂದ ಕವಿ ಚನ್ನವೀರ ಕಣವಿಯವರ ನುಡಿ ನಮನ ಕಾರ್ಯಕ್ರಮ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಭಟ್ಕಳ

ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಚನ್ನವೀರ ಕಣವಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತಾ ಡಾ.ಅರ್.ವಿ.ಷರಾಪ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಣವಿಯವರ ಗೀತೆಗಳನ್ನು ತಮ್ಮ ಶಾಲಾದಿನಗಳಲ್ಲಿ ಓದಿದ ಸಂದರ್ಭವನ್ನು ನೆನಪಿಸಿಕೊಂಡರಲ್ಲದೇ ರಾಷ್ಟçಕವಿ ಪುರಸ್ಕಾರ ಸಿಗಬೇಕೆಂಬ ಕೂಗು ಕೇಳಿಬರುತ್ತಿರುವ ಸಮಯದಲ್ಲೇ ಅವರು ಅಗಲಿರುವುದು ನಿಜಕ್ಕೂ ವಿಷಾದನೀಯ. ಮರಣೊತ್ತರವಾಗಿ ಅವರಿಗೆ ರಾಷ್ಟ್ರಕವಿ ಪುರಸ್ಕಾರ ಸಿಗುವಂತಾಗಬೇಕು ಎಂದು ನುಡಿದರು.

CHETAN KENDULI

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಸಾಹಿತ್ಯ ಲೋಕದಲ್ಲಿ ಚಿರಕಾಲ ನಿಲ್ಲಬಲ್ಲ ಕೃತಿಗಳನ್ನು ನೀಡಿರುವ ಕಣವಿಯವರು ಸಮನ್ವಯತೆಯನ್ನು ಕಾದುಕೊಂಡ ಕವಿ. ಅವರು ತಮ್ಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರ ಮನದಲ್ಲಿ ಹಾಗೂ ಅವರ ವಿಶ್ವ ವಿನೂತನ ಗೀತೆಯ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಗೀತಾಸಕ್ತರ ಮನಸಲ್ಲಿ ಸದಾ ಜೀವಂತವಾಗಿ ಇರುತ್ತಾರೆ ಎಂದು ನುಡಿದರಲ್ಲದೇ ವಿಶ್ವವಿನೂತನ ಗೀತೆಯನ್ನು ಹಾಡಿ ಕಣವಿಯವರಿಗೆ ಗೀತ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿಗಳಾದ ನಾರಾಯಣ ಯಾಜಿ, ಶ್ರೀಧರ ಶೇಟ್, ಪ್ರೊ.ಆರ್.ಎಸ್.ನಾಯ್ಕ ಕಣವಿಯವರ ಸಾಹಿತ್ಯಿಕ ಕೊಡುಗೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಪಿ.ಬಂಢಾರಿ, ಗಣೇಶ ಯಾಜಿ, ಅಮೃತ ರಾಮರಥ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಕಣವಿಯವರ ನಿಧನಕ್ಕೆ ಮೌನಾಚರಣೆಯನ್ನು ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿ ವಂದಿಸಿದರು.

Be the first to comment

Leave a Reply

Your email address will not be published.


*