ಶುದ್ದ ಕುಡಿಯುವ ನೀರಿನ ಘಟಕದ ವಿತರಕ ಬಾಬು ಛಬ್ಬಿಯವರಿಂದ:ದಿನಸಿ ಕಿಟ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

 ಜಿಲ್ಲಾ ಸುದ್ದಿಗಳು

CHETAN KENDULI

ಹುನಗುಂದ ತಾಲ್ಲೂಕಿನ ಅಮೀನಗಡ ಪಟ್ಟಣದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕಿಡಾದ ಕೂಲಿ ಕಾರ್ಮಿಕರಿಗೆ,ಬಡ ನೇಕಾರರಿಗೆ, ಕಲಾವಿದರಿಗೆ, ದಿನಗೂಲಿ ನೌಕರರಿಗೆ ದಿನಸಿ ಕಿಟ್ ವಿತರಿಸಲಾಯಿತು.

ಬಾಗಲಕೋಟೆ: (ಅಮೀನಗಡ)

ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಶುದ್ದ ಕುಡಿಯುವ ನೀರಿನ ಘಟಕದ ವಿತರಕ,ಬಿಜೆಪಿ ನಗರ ಘಟಕದ ಕಾರ್ಯದರ್ಶಿ ಬಾಬು ಛಬ್ಬಿಯವರಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಕೊರೊನಾ ಭೀಕರತೆಯ ಪರಿಣಾಮವಾಗಿ ಲಾಕ್ ಡೌನ್ ಸಂಧರ್ಭದಲ್ಲಿ ತಮ್ಮ ಕುಟುಂಬದ ಪರವಾಗಿ 1ನೇ ವಾರ್ಡಿನಲ್ಲಿ ವಾಸವಿರುವ ಬಡ ನೇಕಾರರು,ಕೂಲಿ ಕಾರ್ಮಿಕರು, ಕಲಾವಿದರು, ದಿನಗೂಲಿ ನೌಕರರು, ಇಂಥಹ 150 ಕುಟುಂಬ ವರ್ಗವನ್ನು ಗುರುತಿಸಿ ಅವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಅವರ ಈ ಸತ್ಕಾರ್ಯಕ್ಕೆ ಅವರ ಗೆಳೆಯರು ಕೈ ಜೋಡಿಸಿದ್ದಾರೆ.

ಕೊರೊನಾ ವೈರಸ್‌ ತೊಲಗಿಸಲು ಹೇರಿದ್ದ ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು ಇನ್ನೂ ಸಹಜ ಜೀವನ ನಡೆಸುವ ಸ್ಥಿತಿಗೆ ಬಂದಿಲ್ಲ.ಹೀಗಾಗಿ ಕೆಲವು ದಿನಗಳಿಂದ ಯಾವುದೇ ಕೂಲಿ ಕೆಲಸವಿಲ್ಲದೇ ಸಂಕಷ್ಟಕ್ಕೀಡಾಗಿರುವ ಜನರ ಸಹಾಯಕ್ಕೆ ಮುಂದಾಗುವುದು ಮನುಷ್ಯ ಧರ್ಮ. ಹೀಗಾಗಿ ಕೂಲಿಕಾರರಿಗೆ ಸ್ವಲ್ಪಮಟ್ಟಿಗಾದರೂ ಸಹಾಯ ಆಗುವ ನಿಟ್ಟಿನಲ್ಲಿಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.


ಇದ್ದವನು ಕೊಡುವುದು ದೊಡ್ಡದಲ್ಲ, ತನ್ನ ಬಳಿ ಇರುವುದನ್ನು ಇನ್ನೊಬ್ಬರಿಗೂ ಹಂಚಿ ತಿನ್ನಬೇಕೆಂಬ ಮನಸ್ಸಿದೆಯಲ್ಲ ಅದು ದೇವತಾರಾಧನೆಯಲ್ಲದೆ ಮತ್ತೇನು?ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


Be the first to comment

Leave a Reply

Your email address will not be published.


*