ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಸಹೋದರನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಮಾದೇವ ಮಾಸ್ತಪ್ಪ ನಾಯ್ಕ ಹಾಗೂ ಕೃಷ್ಣ ಮಾಸ್ತಪ್ಪ ನಾಯ್ಕ ಮುಟ್ಟಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ.
ಈ ಸಹೋದರರಿಬ್ಬರು ವದೆ ಮಾಡುವ ಉದ್ದೇಶದಿಂದ 40 ಸಾವಿರ ಮೌಲ್ಯದ ಎರಡು ಕೋಣಗಳನ್ನು ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮುಟ್ಟಳ್ಳಿ ಕಡೆಯಿಂದ ಮುಟ್ಟಳ್ಳಿ ಬೈಪಾಸ್ ಕಡೆಗೆ ಯಾವುದೇ ಪಾಸ್ ಪರಮೀಟ್ ಇಲ್ಲದೆ ಸಾಗಾಟ ಮಾಡಿಕೊಂಡು ಹೋಗುವಾಗ ಇಲ್ಲಿನ ಬೈಪಾಸ್ ಸಮೀಪ ಕೋಣಗಳ ಸಮೇತ ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬೆನ್ನೆಲ್ಲೆ ಒಂದು ವರ್ಷದಿಂದ ಮುಟ್ಟಳ್ಳಿ ಭಾಗದಲ್ಲಿ ಜಾನುವಾರು ಕಳ್ಳತನವಾಗುತ್ತಿತ್ತು ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದು , ಒಂದೇ ಮನೆಯಿಂದ 2 ಜಾನುವಾರು ಕಳ್ಳತನವಾದ ಉದಾಹರಣೆಗಳು ಕೂಡ ಇರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ರಾಜ್ಯ ಸುದ್ದಿಗಳು ಮುದ್ದೇಬಿಹಾಳ(ವಿಜಯಪುರ ಜಿಲ್ಲೆ): ಒಂದು ಕಡೆ ಆಗಸ್ಟ್ 15 ಮದ್ಯ ರಾತ್ರಿ ಅಖಂಡ ಭಾರತ ಧ್ವಜಾರೋಹನಕ್ಕೆ ಸಜ್ಜಾಗುತ್ತಿದ್ದರೆ ಸಮಾಜದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಸೇವೆಯಲ್ಲಿ […]
ರಾಜ್ಯ ಸುದ್ದಿಗಳು ಶಿರಸಿ ಕ್ಯಾಸಿನೋ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವೆಂಬ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಪ್ರಬಲ ಖಂಡನೆ. ನೈಸರ್ಗಿಕ ಸೊಬಗು ಮತ್ತು ಸಂಪತ್ತಿನ ಆಧಾರದ ಮೇಲೆ […]
ರಾಜ್ಯ ಸುದ್ದಿಗಳು ದೇವನಹಳ್ಳಿ ಹಿಂದಿನ ಕಾಲದಲ್ಲಿ ಪೂರ್ವಜರು ಅಶ್ವತ್ಥ್ಕಟ್ಟೆಗಳಲ್ಲಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಗ್ರಾಮದಲ್ಲಿ ಶಾಂತಿ ನೆಲೆಸಬೇಕಾದರೆ ಅಶ್ವತ್ಥ್ಕಟ್ಟೆ ಪಾತ್ರ ಹೆಚ್ಚು ಇದೆ ಎಂದು ಕೆಪಿಸಿಸಿ ಪ್ರಧಾನ […]
Be the first to comment