ಸ್ವಾತಂತ್ರ್ಯ ಓಟಕ್ಕೆ ಕಟಗಿಹಳ್ಳಿಮಠ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡ ಸ್ವಾತಂತ್ರ್ಯ ಓಟಕ್ಕೆ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ ಶನಿವಾರ ಚಾಲನೆ ನೀಡಿದರು.

ನೆಹರು ಯುವ ಕೇಂದ್ರ, ಬಿವಿವ ಸಂಘದ ಕಲಾ ಮಹಾವಿದ್ಯಾಲ, ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಸಹಯೋಗದಲ್ಲಿ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸ್ವಾತಂತ್ರ್ಯ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲರೂ ದೈಹಿಕವಾಗಿ ಫಿಟ್ ಆಗಿರಬೇಕು ದಿನಾಲು ಯಾವುದಾದರೊಂದು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೋಳ್ಳಬೇಕೆಂದು ವಿನಂತಿಸಿಕೊಂಡರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಶ್ಮಾ ಗವಳಿ ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಅಂಗವಾಗಿ ಆಜಾದಿ ಕಾರ ಅಮೃತ ಮಹೋತ್ಸವ ಕಾರ್ಯಕ್ರಮ ಗಳನ್ನು ಅಕ್ಟೋಬರ 2 ವರೆಗೆ ಹಮ್ಮಿಕೊಂಡಿದ್ದು, ಸ್ವಾಂತಂತ್ರ್ಯ ಓಟವನ್ನು ಜಿಲ್ಲೆಯ 75 ಆಯ್ದ ಗ್ರಾಮಗಳಲ್ಲಿ ಕಾರ್ಯಕ್ರಮ ಜಾರಿಯಲ್ಲಿದೆ ಎಂದು ಹೇಳಿದರು. ಪ್ರತಿಜ್ಞಾವಿದಿಯನ್ನುü ನೆಹರು ಯುವ ಕೇಂದ್ರದ ಲೆಕ್ಕ ಹಾಗೂ ಕಾರ್ಯಕ್ರಮ ಸಹಾಯಕರು ಭೋದಿಸಿದರು.

ಪ್ರತಿಜ್ಞೆ ಮಾಡಿಸುವ ಮೂಲಕ ಫ್ರೀಡಂ ರನ್‍ಗೆ ಚಾಲನೆ ನೀಡಲಾಗಿದ್ದು, ಈ ಸ್ವಾತಂತ್ರ್ಯ ಓಟ ಬಸವೇಶ್ವರ ವಿದ್ಯಾವರ್ಧಕ ಸಂಘದ ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಬವಾಗಿ ಮುಚಖಂಡಿ ಕ್ರಾಸ್ ಮಾರ್ಗವಾಗಿ ಕೆಂಪುಗೋಡೆ, ಚೈತನ್ಯ ಕಾಲೇಜ, ದಡ್ಡೆಣ್ಣವರ ಸರ್ಕಲ್, ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಮಾರ್ಗವಾಗಿ ಮರಳಿ ಬಿವಿವಿ ಸಂಘದ ಆವರಣದಲ್ಲಿ ಮುಕ್ತಾಯಗೊಂಡಿತು. ಈ ಓಟದಲ್ಲಿ ಯುವಜನರು, ಎನ್.ಎಸ್.ಎಸ್, ಎನ್.ಸಿ.ಸಿ, ಎನ್.ವಾಯ್.ಕೆ ಯುವ ಕಾರ್ಯಕರ್ತರು ಸೇರಿದಂತೆ ಒಟ್ಟು 125 ಜನರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಆರ್.ಎಲ್.ಕಾತರಕಿ, ಎಮ್.ಆರ್.ಇಂಗಳಗಿ, ಗಣಾಚಾರಿ, ಎನ್‍ಸಿಸಿ ಅಧಿಕಾರಿಗಳಾದ ಆರ್.ಕೆ.ಕುಲಕರ್ಣಿ ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸ್ ಇಲಾಖೆ ಸಿಬ್ಬಂದಿ ಮತ್ತಿರರು ಉಪಸ್ಥಿತರಿದ್ದರು. ಸಹಾಯಕ ಪ್ರಾದ್ಯಾಪಕ ಕೆ.ಪ್ರಲ್ಹಾದ ಸ್ವಾಗತಿಸಿದರು, ಉಪನ್ಯಾಸಕ ಎಸ್.ವಿ.ಕಟ್ಟಿ ನಿರೂಪಿಸಿ ವಂದಿಸಿದರು.

Be the first to comment

Leave a Reply

Your email address will not be published.


*