ಜೂಜಾಟ, ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸರ ಹದ್ದಿನ ಕಣ್ಣು* _ಒಂದು ತಿಂಗಳಲ್ಲಿ ನಾಲ್ಕೈದು ಪ್ರಕರಣ ದಾಖಲು, ಆರೋಪಿಗಳು ವಶಕ್ಕೆ_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ವಿಶ್ವನಾಥಪುರ ಪೊಲೀಸರ ಖಡಕ್ ಕಾರ್ಯಾಚರಣೆಯಲ್ಲಿ ಠಾಣಾ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಜೂಜಾಟ, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಕಾನೂನುಕ್ರಮ ಜರುಗಿಸುವುದರ ಮೂಲಕ ಪ್ರಕರಣ ದಾಖಲಿಸಲಾಗಿದೆ.ವಿಶ್ವನಾಥಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ವೆಂಕಟೇಶ್ ನೇತೃತ್ವದಲ್ಲಿ ತಾಲೂಕಿನ ಸಾವಕನಹಳ್ಳಿ, ಅರದೇಶನಹಳ್ಳಿ, ದೇವಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಲಾಗಿ, ತಲಾ ಒಂದೊಂದು ಪ್ರಕರಣ ದಾಖಲಾಗಿದ್ದು, ಒಂದು ತಿಂಗಳಲ್ಲಿ ನಾಲ್ಕೈದು ಪ್ರಕರಣಗಳನ್ನು ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಮನಗೊಂಡನಹಳ್ಳಿ, ಮಾಳಿಗೇನಹಳ್ಳಿ ಹಾಗೂ ಮೂಡುಗಾನಹಳ್ಳಿ ಗ್ರಾಮದ ರಾಮಾಂಜಿನಪ್ಪ ಜಮೀನಿನ ತೋಪಿನಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿಕೊಂಡಿದ್ದ ೬ ಜನರ ತಂಡದ ಮೇಲೆ ಖಚಿತ ಮಾಹಿತಿಯ ಮೆರೆಗೆ ವಿಶ್ವನಾಥಪುರ ಠಾಣೆಯ ಪೊಲೀಸರು ದಾಳಿ ನಡೆಸಿ ೩೨,೨೦೦ ರೂ. ನಗದು ಮತ್ತು ೬ ಜನರನ್ನು ವಶಕ್ಕೆ ಪಡೆದುಕೊಂಡು ಯಶಸ್ವಿಯಾಗಿದ್ದಾರೆ.

ಅಕ್ರಮವಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರೇ ತೊಡಗಿಕೊಂಡಿದ್ದರೆ, ಕೂಡಲೇ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕು. ಸಹಕಾರ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ವಿಶ್ವನಾಥಪುರ ಪಿಎಸೈ ಪಿ.ವೆಂಕಟೇಶ್ ತಿಳಿಸಿದರು.

Be the first to comment

Leave a Reply

Your email address will not be published.


*