ಮನೆ ಪರಿಹಾರದಲ್ಲಿ ಅಧಿಕಾರಿಗಳ ಗೋಲಮಾಲ…..!!! ಫಲಾನುಭವಿಗಳಿಗಿಲ್ಲಾ ಸರಕಾರದ ಸಹಾಯಧನ…!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಅಕ್ಟೋಬರ್ 2020ರಲ್ಲಿ ಬಾರಿ ಮಳೆಯಿಂದ ಬಿದ್ದ ಮನೆಗಳನ್ನು ಕಟ್ಟಿಕೊಳ್ಳಲು ಸರಕಾರದಿಂದ ಬರುವಂತಹ ಸಹಾಧನವನ್ನು ನಿಜವಾದ ಫಲಾನುಭವಿಗಳಿಗೆ ಒದಗಿಸದೇ ಬೇರೆಯವರಿಗೆ ಹಣ ದೊರಕುವಂತೆ ಮಾಡಿದ್ದು ಕೂಡಲೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಜಂಗ ಮುರಾಳ ಗ್ರಾಮಸ್ಥರು ತಹಸೀಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಮನವಿ ಸಲ್ಲಿಸಿದರು.

ಮುದ್ದೇಬಿಹಾಳ ತಾಲೂಕಿನ ಜಂಗ ಮುರಾಳ ಗ್ರಾಮಸ್ಥರು ಸರಕಾರದಿಂದ ಬಿದ್ದ ಮನೆಗಳಿಗೆ ಬರುವ ಸಹಾಧನವನ್ನು ಕೂಡಲೇ ಒದಗಿಸುವಂತೆ ಆಗ್ರಹಿಸಿ ತಹಸೀಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಮನವಿ ಸಲ್ಲಿಸಿದರು.

ಪರಿಸರ ಹಾನಿಯಿಂದ ಗ್ರಾಮದಲ್ಲಿ ಬಿದ್ದ ಮನೆಗಳನ್ನು ಸರ್ವೆ ಮಾಡಿರುವ ಗ್ರಾಮ ಲೆಕ್ಕಾಧಿಕಾರಿಗಳು ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವಿಕರಿಸಿ ಬಿದ್ದ ಮನೆಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಸಂಪೂರ್ಣವಾಗಿ ಬಿದ್ದಂತಹ ಮನೆಗಳ ಫಲಾನುಭವಿಗಳಿಗೆ ಇತತಿಚಿಗಷ್ಟೇ ಸರಕಾರ ಬಿಡುಗಡೆ ಮಾಡಿರುವ ಸಹಾಧನ ಬಂದಿರುವುದಿಲ್ಲ. ಆದರೆ ಯಾವುದೇ ಹಾನಿಯಾಗದ ಕೆಲವರ ಮನೆಗಳ ಕೊಟ್ಟಿ ಫಲಾನುಭವಿಗಳ ಖ್ಯಾತೆಗೆ ಹಣ ಬರುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ತಹಸೀಲ್ದಾರ ಅವರಿಗೆ ಕೇಳಿ ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ. ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ ಅವರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಆರ್.ಬಿ.ಹುಲ್ಲೂರ, ಸಿದ್ದಪ್ಪ ಬಾಲಪ್ಪ ಟಕ್ಕಳಕಿ, ಮಾರುತಿ ಪವಾರ, ವಿಕಲಚೇತನ ಸಂಘದ ಅಧ್ಯಕ್ಷ ನಾಗೇಶ ಅಮರಾವತಿ, ಎ.ಎಚ್.ಜೈನಾಪೂರ, ವಿರೇಶ ಗುರುಮಠ, ಶಂಕ್ರೆಮ್ಮ ಗೌಡರ, ಸುರೇಶ ಹುನಶ್ಯಾಳ, ಅಶೋಕ ವಾಲಿಕಾರ, ಆನಂದ ಹಿರೇಮಠ ಇದ್ದರು.

 

Be the first to comment

Leave a Reply

Your email address will not be published.


*