ರುದ್ರಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ:ಸಾರ್ವಜನಿಕರ ತೀವೃ ವಿರೋಧ

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಜಿಲ್ಲಾ ಸುದ್ದಿಗಳು 

ಕುಮಟಾ

ತಾಲೂಕಿನ ಚಿತ್ರಗಿ-ಮದ್ಗುಣಿಯ ರುದ್ರಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದನ್ನು ವಿರೋಧಿಸಿ ಚಿತ್ರಗಿ ಮದ್ಗುಣಿ ಭಾಗದ ಗ್ರಾಮಸ್ಥರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ತಹಶೀಲ್ದಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಹೊಲನಗದ್ದೆ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

CHETAN KENDULI

ಇಲ್ಲಿನ ರುದ್ರಭೂಮಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ವೆ ನಡೆಸಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಗ್ರಾಮಸ್ಥರ ಗಮನಕ್ಕೆ ತರದೇ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ. ಸ್ಮಶಾನಕ್ಕಾಗಿ ಮೀಸಲಿಟ್ಟ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದರಿಂದ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗುತ್ತದೆ. ಈ ರುದ್ರ

ಭೂಮಿ ಪಕ್ಕದಲ್ಲೇ ಜಲ ನಿರ್ಮಲ ಯೋಜನೆಯ ಕುಡಿಯುವ ನೀರಿನ ಟ್ಯಾಂಕ್, ತೆರೆದ ಬಾವಿ ಕೂಡ ಇದೆ. ಈ ಘಟಕದಿಂದ ಮಳೆಗಾಲದಲ್ಲಿ ತ್ಯಾಜ್ಯಗಳ ಹೊಲಸು ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರುವ ಸಾಧ್ಯತೆ ಅಧಿಕವಾಗಿದ್ದು, ಆ ಭಾಗದ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವ ಆಂತಕವಿದೆ. ಹಾಗಾಗಿ ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದಕ್ಕೆ ಸ್ಥಳೀಯರ ಸಂಪೂರ್ಣ ವಿರೋಧವಿರುವುದರಿಂದ ಘಟಕ ಸ್ಥಾಪಿಸುವ ಯೋಜನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಮನವಿ ಸಲ್ಲಿಕೆಯಲ್ಲಿ ಚಿತ್ರಗಿ-ಮದ್ಗುಣಿ ಗ್ರಾಮಸ್ಥರಾದ ಕೃಷ್ಣ ಪಟಗಾರ, ಗೌರೀಶ ಪಟಗಾರ, ರವಿ ಪಟಗಾರ, ಶುಕ್ರು ಪಟಗಾರ, ಗಜಾನನ ಪಟಗಾರ, ಉದಯ ಪಟಗಾರ, ಗಣಪತಿ ಪಟಗಾರ, ಸೋಮಯ್ಯ ಪಟಗಾರ, ಭಾಸ್ಕರ ಪಟಗಾರ, ಮಂಜುನಾಥ ಪಟಗಾರ ಹಾಗೂ ಊರಿನ ಗ್ರಾಮಸ್ಥರು ಇತರರಿದ್ದರು.

Be the first to comment

Leave a Reply

Your email address will not be published.


*