ವಿಕಲಚೇತನ ಕಲಾವಿದ ಮಾಧ್ಯಮದವರಿಗೆ ಜಾತಿ ಬಣ್ಣ ತರಬೇಡಿ: ಜೆ.ನಾಗರಾಜ್ ಪೂಜಾರಿ

ಕಾರಟಗಿ:ಎ:17: ವಿಕಲಚೇತನರಿಗೆ ಕಲಾವಿದರಿಗೆ ಮಾಧ್ಯಮದವರಿಗೆ ಜಾತಿ ಬಣ್ಣತರಬೇಡಿ ಎಂದು ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಅಧ್ಯಕ್ಷರು ಜೆ.ನಾಗರಾಜ್ ಪೂಜಾರಿ ಹೇಳಿದರು,

ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ (ರಿ) ವತಿಯಿಂದ ಶನಿವಾರದಂದು ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯ್ದ ವಿಕಲಚೇತನರಿಗೆ ದಿನಸಿ ಕಿಟ್ ನ್ನು ವಿತರಿಸಿ ಅವರು ಮಾತನಾಡಿದರು, ವಿಕಲಚೇತನರನ್ನು ಗೌರವದಿಂದ ಕಾಣಿ ಪ್ರಕೃತಿ ನಿಯಮದಿಂದ ಅವರಿಗೆ ಕೋಪ ತಾಪ ಸಿಟ್ಟು ಆಸೆ ಆಕಾಂಕ್ಷೆ ಇದ್ದೆ ಇರುತ್ತವೆ, ಅವರನ್ನು ಅವರಂತೆ ಬದಕಲು ಬಿಡಿ ಎಂದು ತಿಳಿಸಿದರು,


ಕಾರ್ಯಕ್ರಮದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರ ಹಾಗೂ ಡಾ:ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ವೀರಭದ್ರಶ್ವರ ಮಹಾಸ್ವಾಮಿಗಳು ತಲೇಖಾನ ಮಠ ಇವರು ಮಾತನಾಡಿ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ನವರ ಈ ಒಂದು ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಪಟ್ಟಣದಲ್ಲಿ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ ಎಂದು ತಿಳಿಸಿದರು, ಇಂದಿನ ದಿನಮಾನಗಳಲ್ಲಿ ಯುವಕರು ಪಶ್ಚಾರಾಷ್ಟ್ರಗಳ ಜೀವನ ಅಳವಡಿಸಿಳ್ಳುತ್ತಿರುವ ಸಂದರ್ಭದಲ್ಲಿ ವಿಕಲಚೇತನರನ್ನು ಗುರುತಿಸಿ ಅಂತವರಿಗೆ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯ ಮಾಡುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು, ಟ್ರಸ್ಟ್ ನವರು ಈ ಸಾಮಾಜ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೊಬ್ಬರಿಗೆ ಮಾರ್ಗ ದರ್ಶನವಾಗಲಿ ಎಂದು ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ನ ಅಧ್ಯಕ್ಷರು ಜೆ.ನಾಗರಾಜ್ ಪೂಜಾರಿ ಇವರನ್ನು ಸನ್ಮಾನಿಸಿದರು,
ಟ್ರಸ್ಟ್ ನವರ ಮುಂದಿನ ಕಾರ್ಯಕ್ರಮಕ್ಕೆ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ವಿಕಲಚೇತನರಿಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸರ್ದಾರ್ ಆಲಿ ಮಾತನಾಡಿ ಟ್ರಸ್ಟ್ ನವರ ಸಾಮಾಜಿಕ ಕಾರ್ಯಕ್ರಮಕ್ಕೆ ತಮ್ಮ ಸಹಮತ ಇರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಗಾಯಕ ಭೋಜರಾಜ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸರ್ಕಾರಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ತಿಮ್ಮಣ್ಣ ನಾಯಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ್ ಮರ್ಲನಹಳ್ಳಿ. ಟ್ರಸ್ಟ್ ನ ಕಾರ್ಯದರ್ಶಿ ಪ್ರೇಮ ಅಮರೇಶ್. ಸದಸ್ಯರಾದ
ನಿಂಗರಾಜ್ (ತೇಜು)
ಅಂಬಣ್ಣ ಉಳೇನೂರು.
ಶಿಕ್ಷಕ ಲಕ್ಷ್ಮಣ ಸಿದ್ದಾಪುರ.
ಮಾಂಬ್ಳೆಶ್ ದೊಡ್ಡಮನಿ
ಗೌರಮ್ಮ ಯರಡೋಣ,
ಪಕೀರಮ್ಮ. ಬಸಮ್ಮ. ರಾಜ್ ಸಾಬ್. ಬಸಯ್ಯ ಸ್ವಾಮಿ ಇನ್ನಿತರ ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

Be the first to comment

Leave a Reply

Your email address will not be published.


*