ರಾಜ್ಯ ಸುದ್ದಿಗಳು
ಬ್ಯಾಟರಾಯನಪುರ
ಚಿಕ್ಕಜಾಲ ಠಾಣೆ ಇನ್ಸ್ ಪೆಕ್ಟರ್ ರಾಘವೇಂದ್ರ ಎಸ್ ಆರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಮೀನು ತಕರಾರು ವಿಷಯವೊಂದರ ಸಂಬಂಧ
ಎರಡು ಲಕ್ಷ ಲಂಚ ಸ್ವೀಕರಿಸುತಿದ್ದ ವೇಳೆ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿವರ : ಚಿಕ್ಕಜಾಲ ಟೋಲ್ ಬಳಿಯ 5 ಎಕರೆ ಜಮೀನು ತಕರಾರು ವಿಷಯವೊಂದರ ಸಂಬಂಧ ಶಿವಶಂಕರ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಿಸಲು ವ್ಯಕ್ತಿಯೊಬ್ಬರಿಗೆ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ಪೈಕಿ ಈಗಾಗಲೇ
ಎರಡು ಬಾರಿ ತಲಾ ನಾಲ್ಕು ಲಕ್ಷ ರು.ನಂತೆ ಒಟ್ಟು ಎಂಟು ಲಕ್ಷ ರು. ಹಣ ಲಂಚ ಪಡೆದಿದ್ದ ಇನ್ಸ್ ಪೆಕ್ಟರ್ ರಾಘವೇಂದ್ರ ಎಸ್ ಆರ್ಮೂರನೇ ಹಾಗೂ ಕೊನೆಯ ಕಂತಾಗಿ ಎರಡು ಲಕ್ಷ ಹಣ ಪಡೆಯುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಇನ್ನ್ ಪೆಕ್ಟರ್ ರಾಘವೇಂದ್ರ ಎಸ್ ಆರ್ ರವರ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ಸ್ ಪೆಕ್ಟರ್ ರಾಘವೇಂದ್ರ ರವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದರಿ 5 ಎಕರೆ ಜಮೀನು ವಿಷಯದಲ್ಲಿ ಈ ಹಿಂದೆ ಇದೇ ಠಾಣೆಯ ಇನ್ಸ್ ಪೆಕ್ಟರ್ ಯಶವಂತ್ ಎಂಬುವವರು ಸಹ ಎಸಿಬಿ ಬಲೆಗೆ ಬಿದ್ದಿದ್ದರು ಎಂಬುದು ಗಮನಾರ್ಹ ವಿಷಯ.
Be the first to comment