ಭಟ್ಕಳದ ಸೋಡಿಗದ್ದೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ಭಟ್ಕಳ

CHETAN KENDULI

 

ಶ್ರೀ ವೀರಮಾರುತಿ ದೇವಸ್ಥಾನದ ಆಡಳಿತ ಮಂಡಳಿ, ಸೋಡಿಗದ್ದೆ ಹಿತ್ಲು, ಬೆಳ್ಕೆ* ಇವರ ನೇತೃತ್ವದಲ್ಲಿ *ತಾಲೂಕು ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ರಕ್ತನಿಧಿ* ಇವರ ಸಂಯುಕ್ತ ಆಶ್ರಯದಲ್ಲಿ ಇಂದಿನ ರಕ್ತದಾನ ಶಿಬಿರ ಶ್ರೀ ಮಹಾಸತಿ ಅನ್ನದಾನ ಛತ್ರ ಸೋಡಿಗದ್ದೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ರಕ್ತದಾನ ಶಿಬಿರದ ಉದ್ಘಾಟನೆಯನ್ನು ಶ್ರೀ ವೀರ ಮಾರುತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಂಜು ಎಮ್ ಮೊಗೇರ, ಬೆಳ್ಕೆ ಮೊಗೇರ ಸಮಾಜದ ಅಧ್ಯಕ್ಷರಾದ ಶ್ರೀ ಶನಿಯಾರ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ದೇವಿದಾಸ ಮೊಗೇರ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯವರಾದ ಡಾ. ಸವಿತಾ ಕಾಮತ್, ಹೃದ್ರೋಗ ತಜ್ಞರಾದ ಡಾ. ಯಜ್ಞೇಶ್ ಭಾಗವಹಿಸಿ ಶಿಬಿರವನ್ನು ಉದ್ಘಾಟಿಸಿ ಸರಳವಾಗಿ ಸಭಾ ಕಾರ್ಯಕ್ರಮ ನೆರವೇರಿಸಿದರು.
ಬೆಳಿಗ್ಗೆಯಿಂದಲೇ ನಿರಂತರವಾಗಿ ಬಾರಿ ಮಳೆಯಾಗುತ್ತಿದ್ದರೂ ಸಹ ಈ ಒಂದು ದೂರದ ಗ್ರಾಮೀಣ ಪ್ರದೇಶಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಬಂದು ರಕ್ತದಾನ ಮಾಡಿ *71 ಯೂನಿಟ್ ರಕ್ತ* ಸಂಗ್ರಹಣೆಗೆ ಸಹಕರಿಸಿರುವುದು ಶ್ಲಾಘನೀಯ ಹಾಗೂ ಎಲ್ಲಾ ರಕ್ತದಾನಿ ಬಂಧುಗಳಿಗೆ ಆಯೋಜಕರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.


ಶ್ರೀ ವೀರ ಮಾರುತಿ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ತುಂಬಾ ಜವಾಬ್ದಾರಿಯುತವಾಗಿ ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುತ್ತಾರೆ.
ಈ ಒಂದು ಯಶಸ್ವಿ ಶಿಬಿರದ ಆಯೋಜನೆಗೆ ಸಹಕರಿಸಿದ ಭಟ್ಕಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಉಡುಪಿ ರಕ್ತನಿಧಿಯ ಸಿಬ್ಬಂದಿಗಳಿಗೆ ಹಾಗೂ ಶಿಬಿರ ನಡೆಸಲು ಅನ್ನದಾನ ಛತ್ರವನ್ನು ನೀಡಿ ಸಹಕರಿಸಿದ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಆಡಳಿತ ಮಂಡಳಿಗೆ ಆಯೋಜಕರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.

Be the first to comment

Leave a Reply

Your email address will not be published.


*