ಭಟ್ಕಳ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಸಹಾಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ :

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ಭಟ್ಕಳ

CHETAN KENDULI

– ಕಾಂಗ್ರೇಸ್ ಪಕ್ಷದ ಉಸ್ತುವಾರಿಗಳಾದ ಬಿ.ಕೆ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಸಹಾಯ ಹಸ್ತ ಕಾರ್ಯಕ್ರಮವನ್ನು ರವಿವಾರ ಭಟ್ಕಳ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ಹಮ್ಮಿಹೊಳ್ಳಲಾಯಿತು.
ರವಿವಾರ ಅವರು ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬಿಜೆಪಿ ಸರಕಾರ ಬಾಯಿ ತೆರೆದರೆ ಬರಿ ಸುಳ್ಳನ್ನೆ ಹೇಳುತ್ತದೆ. ಕೊರೊನಾ ಸಮಯದಲ್ಲಿ ಸೊಂಕಿತರಿಗೆ ಸರಿಯಾದ ಚಿಕಿತ್ಸೆಗಳನ್ನು ನಿಡಲು ಬಿಜೆಪಿ ಸರಕಾರ ವಿಪಲವಾಗಿದೆ. ಹಾಗು ಸೊಂಕಿನಿಂದ ಸತ್ತವರ ಸಂಖ್ಯೆಯನ್ನು ಕೂಡಾ ಮುಚ್ಚಿಡುತ್ತಿದೆ, ಇದು ತುಂಬಾ ನಾಚಿಕೆಗೇಡಿತನವಾಗಿದೆ. ದೇಶದಾದ್ಯಂತ ಪವಿತ್ರ ನದಿಗಳಲ್ಲಿ ಸತ್ತವರ ಶವಗಳನ್ನು ಕೂಡಾ ತೇಲಿ ಬಿಡಲಾಗಿತ್ತು. ಬಿಜೆಪಿ ಸರಕಾರ ಸೊಂಕಿನಿಂದ ಸತ್ತವರ ಸಂಖ್ಯೆ ಸಹ ಸುಳ್ಳು ಲೆಕ್ಕವನ್ನು ನೀಡಿ ಜನತೆಗೆ ಮೊಸವೆಸಗಿದೆ. ಇನ್ನು ಮುಂದೆ ನಮ್ಮ ಕಾಂಗ್ರೇಸ್ ಪಕ್ಷದ ವತಿಯಿಂದ ದೇಶದ ಹಳ್ಳಿ ಹಳ್ಳಿಗಳಿಗೆ ತೆರಳಿ ಸಹಾಯ ಹಸ್ತ ಎನ್ನುವ ಕಾರ್ಯಕ್ರಮದ ಮೂಲಕ ಜನತೆಯ ಕಣ್ಣಿರನ್ನು ವರೆಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವ್ಯೆದ್ಯ ಮಾತನಾಡಿ ಸ್ಥಳಿಯ ಶಾಸಕ ಸುನಿಲ್ ನಾಯ್ಕ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತ ಸ್ಥಳಿಯ ಶಾಸಕ ಸುಳ್ಳನ್ನು ಹೇಳುವುದನ್ನು ಬಿಟ್ಟರೆ ಏನು ಮಾಡಲಿಲ್ಲಾ ಅಭಿವೃದ್ದಿ ಶೂನ್ಯವಾಗಿದೆ . ಹೊನ್ನಾವರ ಬಂದರು ಅಭಿವೃದ್ದಿ ಕಾಮಗಾರಿ ಪ್ರಸ್ತಾವನೆ ಬಿಜೆಪಿ ಸರಕಾರ ಸಮಯದಲ್ಲೆ ನಡೆಸಲಾಗಿತ್ತು ಆ ಸಮಯದಲ್ಲಿ ಸ್ಥಳಿಯ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸುವ ಆಶ್ವಾಸನೆಯನ್ನು ನಿಡಲಾಗಿತ್ತು ಆದರೆ ಈಗ ಅಲ್ಲಿರುವ ಸ್ಥಳಿಯರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಲಾಗುತ್ತಿದೆ . ಆದರೆ ತಾನು ಮಾಡುತ್ತಿರುವ ಅಮಾನವಿಯ ಕೆಲಸವನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಲಸಕ್ಕೆ ಕೈ ಹಾಕಿದೆ ಇದು ಖಂಡನಿಯ ಈ ಬಗ್ಗೆ ಸಾರ್ವಜನಿಕರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಹೇಳಿದರು.


ಈ ಸಂದರ್ಬದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕ್, ಮಾಜಿ ಶಾಸಕರಾದ ಶ್ರೀ ಜೆ ಡಿ ನಾಯ್ಕ್, ಶ್ರೀ ಆರ್ ಏನ್ ನಾಯ್ಕ್, ಉಸ್ತುವಾರಿಗಳಾದ ಶ್ರೀ ವಿ ಎಸ್ ಆರಾಧ್ಯ, ಶ್ರೀ ಜಿ ವಿ ಭಾವಾ, ಶ್ರೀಮತಿ ವೆರೋನಿಕಾ, ಶ್ರೀಮತಿ ಸುನೀತಾ ಶೆಟ್ಟಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಮಜೀದ್, ಎಸ್ ಸಿ ವಿಭಾಗದ ಅಧ್ಯಕ್ಷರಾದ ಶ್ರೀ ಬಸವರಾಜ ದೊಡ್ಮನಿ, ಹಿಂದುಳಿದ ವಿಭಾಗದ ಅಧ್ಯಕ್ಷರಾದ ನಾಗರಾಜ ನಾರ್ವೇಕರ್, ಬ್ಲಾಕ್ ಅಧ್ಯಕ್ಷರಾದ ಸಂತೋಷ್ ನಾಯ್ಕ್ ಮತ್ತು ಪಕ್ಷದ ಇತರ ನಾಯಕರು ಕಾರ್ಯಕರ್ತರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*