ರಾಜ್ಯ ಸುದ್ದಿಗಳು
ದೇವನಹಳ್ಳಿ
.ತಾಲ್ಲೂಕಿನ ಅತ್ತಿಬೆಲೆ ಬಳಿ ಇರುವ ಅನಂತ ವಿಧ್ಯಾನಿಕೇತನ ಶಾಲೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾಗಿ ಸಚಿವ ಎಂ.ಟಿ.ಬಿ.ನಾಗರಾಜ್ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊಸಕೋಟೆಯಲ್ಲಿ ತ್ರಿಚಕ್ರವಾಹನ ವಿತರಣೆಗೆ ಪ್ರೊಟೋಕಾಲ್‌ನಂತೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವು. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದಾರೆ. ಅದರಂತೆ ಕಾರ್ಯಕ್ರಮಕ್ಕೆ ಆಗಮಿಸಿ ಶಾಸಕ ಶರತ್ ಬಚ್ಚೇಗೌಡ ಅವರ 50 ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ 8 ದಿನ ಮುಂಚಿತವಾಗಿ ಕಾರ್ಯಕ್ರಮ ಬಗ್ಗೆ ತಿಳಿಸಬೇಕು. ಪ್ರತಿ ಅಭಿವೃದ್ದಿ ವಿಚಾರದಲ್ಲಿ ಅವರು ಇದೇ ರೀತಿ ತಗಾದೆ ತೆಗೆಯುತ್ತಾರೆ. ಈಗಾಗಲೇ 2 ಭಾರಿ ಪ್ರಕಣ ದಾಖಲಾಗಿದೆ. ಶುಕ್ರವಾರ ನಡೆದ ಗಲಾಟೆ ವಿಚಾರವಾಗಿ ಪ್ರಕರಣ ದಾಖಲಾಗಿದೆ. ದಿನಾ ರಾಚಕೀಯ ಮಾಡುವುದು ಸರಿಯಲ್ಲ ಚುನಾವಣೆ ಬಂದಾಗ ರಾಜಕೀಯ ಮಾಡಬೇಕು.ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಅಭಿವೃದ್ದಿ ದೃಷ್ಠಿಯಿಂದ ಕೆಲಸ ಮಾಡಬೇಕು. ಸಭೆ ಸಮಾರಂಭಗಳಿಗೆ ಆಹ್ವಾನ ನೀಡಿದರು ಬರದೆ ಪ್ರತಿಭಟನೆ ಮಾಡುತ್ತಿದ್ದಾರೆ ಅದರಿಂದ ಲಾಭಕ್ಕಿಂತ ನಷ್ಟವೆ ಹೆಚ್ಚು. ಕಳೆದ 40 ವರ್ಷಗಳಿಂದ ಗೂಂಡಾಗಿರಿ, ದಬ್ಬಾಳಿಕೆ ಚುನಾವಣೆ ಸಮಯದಲ್ಲಿ ಜನರನ್ನು ಹೆದರಿಸುವುದು. ಬೂತ್ ರಿಗ್ಗೀಂಗ್ ಮಾಡುವುದು ಅವರ ಕೆಲಸ
2004ರ ಚುನಾವಣೆಯಲ್ಲಿ 20 ಬೂತ್‌ಗಳಿಗೆ ನಾನು ಹೋಗಲಿಕ್ಕೆ ಬಿಡಲಿಲ್ಲ, ಪೊಲೀಸರ ಸಹಕಾರ ಪಡೆದು ಬೂತ್‌ಗಳ ಬಳಿ ತೆರಳುವಂತಾಗಿತ್ತು. ನಾನು 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ತಾಲ್ಲೂಕಿನಲ್ಲಿ ನಮ್ಮ ಅವಧಿಯಲ್ಲಿ ಎಷ್ಟು ಅಭಿವೃದ್ದಿ ಕೆಲಸಗಳಾಗಿವೆ ಎಂದು ಜನರನ್ನೇ ಕೇಳೆ ಆದರೆ ತಂದೆ ಮಗನ ಅಧಿಕಾರವಧಿಯಲ್ಲಿ ಎಷ್ಟು ಅಭಿವೃದ್ದಿ ಕೆಲಸಗಲಾಗಿವೆ ಎಂದು ಜನರೆ ತಿಳಿಸುತ್ತಾರೆ.
ಹೊಸಕೋಟೆ ತಾಲ್ಲೂಕಿನಲ್ಲಿ ಮಂತ್ರಿಗಳ ಮಾತುಕೇಳದಿದ್ದರೆ ಅಧಿಕಾರಗಳನ್ನು ವರ್ಗಾವಣೆ ಮಾಡುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿ ಮಾತನಾಡಿ 2-3 ವರ್ಷ ಅಧಿಕಾರಿಗಳು ಅದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಆಥವ ಸಾರ್ವಜನಿಕರಿಂದ ದೂರುಗಳು ಬಂದರೆ ಹಾಗು ಸಾರ್ವಜನಿಕರ ಕೆಲಸಗಳಿಗೆ ಹಣ ವಸೂಲಿ ಮಾಡುತ್ತಿದ್ದರೆ. ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇವೆ. ಜನಪ್ರತಿನಿಧಿಗಳಾದ ನಾವು ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸಬೇಕು ರಾಜಕೀಯವೆಂದರೆ ಪ್ರಜಾಸೇವೆ. ಮತದಾರರು ನಮ್ಮನ್ನು ಆಯ್ಕೆ ಮಾಡಿಕಳುಹಿಸುವುದು ಜನಸೇವೆ ಮಾಡಲಿಕ್ಕೆ ಆದರೆ ಬಚ್ಚೇಗೌಡ ಹಾಗು ಅವರ ಮಗ ಕುಂಟೆ, ಗುಂಡುತೋಪು, ಸ್ಮಶಾನ ಜಾಗಗಳನ್ನು ಅವರ ಹೆಸರಿಗೆ ಹಾಗು ಅವರಿಗೆ ಬೇಕಾದವರೆ ಹೆಸರಿಗೆ ಖಾತೆ ಮಾಡಿಕೊಳ್ಳಲು ಅಲ್ಲ. ಎಲ್ಲಾ ಅಗರಣಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಬಹಿರಂಗವಾಗಿ ಮಾಧ್ಯಮದ ಮುಂದೆ ಬನ್ನಿ ಎಂದು ಟಾಂಗ್ ನೀಡಿದರು. ನಾನೇನಾದರು ಜನರಿಗೆ ದ್ರೋಹಮಾಡಿದ್ದು ಸಾಬಿತಾದರೆ ಕೂಡಲೆ ರಾಜಿನಾಮೆ ನೀಡಲು ಸಿದ್ದ ಎಂದರು.
Be the first to comment