ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಇಂದಿನ ದಿನಗಳಲ್ಲಿ ಅತ್ಯಂತ್ಯ ಹೆಚ್ಚಿನ ಬೇಡಿಕೆಯಲ್ಲಿರುವ ಇತನಾಲ್ ದೇಶದ ಬೆನ್ನೆಲುಬಾಗಿರುವ ರೈತರಿಗೆ ಆರ್ಥಿಕ ಸ್ಥಿತಿ ಏಳಿಗೆ ತರುವಂತಾಗಿದೆ. ರೈತರು ಜಮೀನಿನಲ್ಲಿ ಬೆಳೆ ಕಬ್ಬು, ತೊಗರಿ ಸೇರಿದಂತೆ ಇನ್ನಿತರ ಬೆಳಗಳ ಕಟಾವಿನಿಂದ ಇತನಾಲ್ ತಯ್ಯಾರಿಸಬಹುದಾಗಿದೆ. ಇದರಿಂದ ರೈತರಿಗೆ ಅವರ ಬೆಳೆಯ ಕಸಕ್ಕೂ ಬೆಡಿಕೆಯಾಗುತ್ತದೆ. ಇಂತಹ ಕಸದಿಂದ ರಸ ತಯ್ಯಾರಿಸುವ ವಿನೂತನ ಖಾರ್ಕಾನೆಯೊಂದು ಮುದ್ದೇಬಿಹಾಳ ತಾಲೂಕಿನಲ್ಲಿ ತೆಲೆ ಎತ್ತಲಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ರೈತರು ಬೆಳೆದ ಬೆಳೆಗಳ ಕಸದಿಂದ ರಸ ತೆಗೆದು ಅದರಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಠಿ ಮಾಡುವ ದಿಸೆಯಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ನಡಹಳ್ಳಿ ಇತನಾಲ್ ಫ್ಯಾಕ್ಟರಿ ಬರಲಿದೆ. ಈಗಾಗಲೇ ಖಾರ್ಕಾನೆಗಾಗಿ ಬೇಕಾದ ಪರವಾಣಿಗೆಯ ಬಗ್ಗೆ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದ 6 ತಿಂಗಳಲ್ಲಿ ತಾಲೂಕಿನಲ್ಲಿ ಇತನಾಲ್ ಫ್ಯಕ್ಟರಿ ಕಾಮಗಾರಿಗೆ ಚಾಲನೆ ದೊರಕಲಿದ್ದು ತಾಲೂಕು ಕೈಗಾರಿಕಾ ಕೇಂದ್ರವಾಗಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
Be the first to comment