ರಾಜ್ಯ ಸುದ್ದಿಗಳು
ಶಿರಸಿ
ಕೊರೊನಾ ಸಾಂಕ್ರಾಮಿಕ ರೋಗ ತಡೆಗೆ ವಾರಾಂತ್ಯದ ಕರ್ಪ್ಯೂ ಘೋಷಿಸಿದೆ. ಅದರ ಬಗ್ಗೆ ಜನರಿಗೆ ತಿಳುವಳಿಕೆ ಹೇಳಬೇಕಾಗಿದ್ದ ವೈದ್ಯರೇ ದಂಡು ಕಟ್ಟಿಕೊಂಡು ತಾಲೂಕಿನ ಪಾಂಡವರ ಹೊಳೆಗೆ ಹೋಗಿ ಮೋಜು ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪಾಂಡವರ ಹೊಳೆಗೆ ಶಿರಸಿ ವೈದ್ಯರ ದಂಡು ಭೇಟಿ ನೀಡಿ ಹೊಳೆಯಲ್ಲಿ ಮೋಜು ಮಾಡಿರುವ ಹಾಗೂ ದೊಡ್ಡದಾಗಿ ಹಾಡು ಹಚ್ಚಿಕೊಂಡು ಕುಣಿದಾಡಿದ ವಿಡಿಯೋ ವೈರಲ್ ಆಗಿದ್ದು, ಇದನ್ನು ಸ್ವತಃ ವೈದ್ಯ ಡಾ.ದಿನೇಶ್ ಹೆಗಡೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈದ್ಯ ದಿನೇಶ ಹೆಗಡೆ ಸೇರಿದಂತೆ ಅಂದಾಜು 10 ವೈದ್ಯರ ತಂಡ ಪಾಂಡವರ ಹೊಳೆಯಲ್ಲಿ ಮೋಜು ಮಸ್ತಿ ನಡೆಸಿದೆ. ಭಾನುವಾರ ಕರ್ಫ್ಯೂ ಇದ್ದರೂ ಸಹ ಹೊಳೆಯಲ್ಲಿ ಮೋಜು ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾನ್ಯರಿಗೊಂದು ? ಶ್ರೀಮಂತರಿಗೊಂದು ಕಾನೂನೇ ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವೈದ್ಯ ದಿನೇಶ ಹೆಗಡೆ ತಮ್ಮ ಫೆಸ್ಬುಕ್ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿವಿಧ ಟ್ರೋಲ್ ಪೇಜ್ ಗಳಲ್ಲಿಯೂ ಸಹ ವಿಡಿಯೋ ಹಾಗೂ ವೈದ್ಯರ ಮೋಜು ಮಸ್ತಿಯ ಫೋಟೋ ವೈರಲ್ ಆಗಿದೆ.
ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿರುವುದು.ಇನ್ನು ಪಾಂಡವರ ಹೊಳೆಯಲ್ಲಿ ಈಜಬಾರದು ಎಂದು ಶಿರಸಿ ಗ್ರಾಮೀಣ ಠಾಣೆಯಿಂದ ಫಲಕ ಸಹ ಹಾಕಿದ್ದಾರೆ. ಅದನ್ನೂ ಮೀರಿ ಮೋಜಿನಲ್ಲಿ ತೊಡಗಿದ ವೈದ್ಯರ ಮೇಲೆ ಕ್ರಮ ಆಗಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದ್ದು, ಕರ್ಪ್ಯೂ ಉಲ್ಲಂಘಿಸಿದ ಕುರಿತೂ ಪ್ರಕರಣ ದಾಖಲಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
Be the first to comment