ಅನ್ನದಾಸೋಹ ಸಮಿತಿಯ ಕಾರ್ಯವೈಖರಿ ಸಮಾಜಕ್ಕೆ ಮಾದರಿಯಾಗಿದೆ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ್ಲೇಶ್ ಮತ್ತು ತಂಡದ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮ ಸತತವಾಗಿ ಸಾಗುತ್ತಿದ್ದು ಇಂದಿಗೆ 750 ನೇ ದಿನಕ್ಕೆ ಕಾಲಿಟ್ಟಿದೆ .750ನೇ ಅನ್ನ ದಾಸೋಹ ಕಾರ್ಯಕ್ರಮದ ಅಂಗವಾಗಿ ಮಾಹಿತಿಹಕ್ಕು ಕಾರ್ಯಕರ್ತರ ವೇದಿಕೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿತ್ತು ಜೊತೆಗೆ ಇಬ್ಬರು ಬಡ ವಿಧ್ಯಾರ್ಥಿಗಳಿಗೆ ವಿದ್ಯಾಬ್ಯಾಸ ನೀಡುವುದರೊಂದಿಗೆ ದತ್ತು ಪಡೆಯುವ ಮೂಲಕ ಸೋಮವಾರ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯ ಘಟಕವನ್ನು ಉದ್ಘಾಟಿಸಲಾಯಿತು .ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ರಾಜ್ಯ ಆರೋಗ್ಯ ಇಲಾಖೆ ಉಪ ನಿರ್ದೇಶಕರಾದ ಡಾ.ಕೆ.ಎಸ್.ರಾಜೇಶ್ ಇಲ್ಲಿ 750 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅನ್ನದಾಸೋಹ ನಿಜವಾಗಿ ಹಸಿದವರಿಗೆ ಅನ್ನ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಈ ಮೂಲಕ ನಿರಂತರವಾಗಿ ಅನ್ನದಾಸೋಹ ನಡೆಸುವಲ್ಲಿ ಪ್ರತ್ಯೇಕ ಫಂಡ್ ಸಂಗ್ರಹ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಈ ಸೇವಾಕಾರ್ಯಕ್ಕೆ ನಾವು ಕೈ ಜೋಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

CHETAN KENDULI

ವಕೀಲರಾದ ರವಿ ಮಾವಿನಕುಂಟೆ ಮಾತನಾಡಿ, ನಿಸ್ವಾರ್ಥ ಸೇವೆಯಿಂದ ಭ್ರಷ್ಟರನ್ನು ಓಡಿಸಲು ಸಾದ್ಯವಾಗುತ್ತದೆ ಈ ನಿಟ್ಟಿನಲ್ಲಿ ಮನವಹಕ್ಕು ಕಾರ್ಯಕರ್ತರ ವೇದಿಕೆ ಕೆಲಸ ಮಾಡಲಿ. ನಿಮ್ಮ ಸೇವೆ ಸಮಾಜಕ್ಕೆ ಬಳಸಿದರೆ ಉಳಿಯುತ್ತೆ. ಮಾಹಿತಿ ಹಕ್ಕು ಅರ್ಜಿಗಳು ಇಂದಿಗೂ ಹೈಕೋರ್ಟ್ ಮುಂದೆ ಬಂದಿಲ್ಲ. ಬ0ಡವಾಳ ಶಾಹಿಗಳ ಸುತ್ತ ಗಿರಕಿ ಹೊಡಿತ್ತಿವೆ. ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂದ್ರಪ್ಪ ಮಾತನಾಡಿ, ರಾಜಕೀಯ ದುರೀಣರು ರಾಕ್ಷರೊಪಾದಿಯಲ್ಲಿ ಬೆಳೆಯುತ್ತಿದ್ದಾರೆ. ಈ ಹಂತದಲ್ಲಿ ವೇದಿಕೆ ಆರ್.ಟಿ.ಐ ಅಸ್ತ್ರವನ್ನು ನಿಸ್ವಾರ್ಥ ಸೇವೆಯ ಉದ್ದೇಶದೊಂದಿಗೆ ಬಳಕೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಎಲ್.ಮಲ್ಲೇಶ್, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ವಿ.ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಹೇಮಂತ್, ರಾಜ್ಯ ಕಾರ್ಯದರ್ಶಿ ಲಕ್ಷ್ಮಣ್, ರಾಜ್ಯ ಉಪಾಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಮಾಧ್ಯಮ ವಕ್ತಾರ ರಾಜೇಶ್ ಎಸ್.ಜಿ ಮುಕ್ಕೇನಹಳ್ಳಿ, ರಾಜ್ಯ ಖಜಾಂಚಿ ಗಂಗಮ್ಮ, ರಾಜ್ಯ ಸಮಿತಿ ಸದಸ್ಯ ಮುನೇಗೌಡ, ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಪ್ರಮೀಳಾ ಮಹದೇವ್, ಯೋಗಾ ಗುರುಗಳಾದ ಅಮರನಾಥ್, ಶ್ರೀಕಾಂತ್, ಕೃಷ್ಣಪ್ಪ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎ.ನಂಜಪ್ಪ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕತ ಕೆ.ಪಿ.ಪ್ರಕಾಶ್, ನಗರ ಸಭೆ ಮಾಜಿ ಸದಸ್ಯ ಪಿ.ಸಿ.ಲಕ್ಷ್ಮಿನಾರಾಯಣ್, ಆರ್ ಟಿ ಐ ಕಾರ್ಯಕರ್ತ ರಾದ ಆನಂದ್, ಗ್ರಾಪಂ ಸದಸ್ಯೆ ಶಶಿಕಲಾ ನಾಗರಾಜ್, ಆಶಾ ಕಾರ್ಯಕರ್ತೆ ರತ್ನಮ್ಮ, ಮುನಿಲಕ್ಷ್ಮಮ್ಮ, ಮುಖಂಡರಾದ ಶಂಭು ಶಂಕರ್, ಮಹಾಲಿಂಗ, ಮೆಳೇಕೋಟೆ ಕ್ರಾಸ್ ಎಸ್.ಬಿ.ರಮೇಶ್ ಹಾಗೂ ಅನ್ನದಾಸೋಹ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*