ಹಸಿರೀಕರಣಗೊಳಿಸಲು ಗಿಡಮರಗಳನ್ನು ಹೆಚ್ಚಾಗಿ ಬೆಳೆಸಬೇಕು: ರೋಟರಿ ಸಂಸ್ಥೆ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಗ್ರಾಮೀಣ ಭಾಗದ ಕೆರೆಯ ಸುತ್ತಮುತ್ತಲು ಹಚ್ಚಹಸಿರಿನ ವಾತಾವರಣ ಸೃಷ್ಠಿಯಾಗಲು ಪ್ರತಿ ರೈತರು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ರೋಟರಿ ರಾಜಮಹಲ್ ವಿಲಾಸ್ ಅಧ್ಯಕ್ಷ ಶಂಕರ ಸುಬ್ರಮಣಿಯನ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕೊಯಿರ ಕೆರೆಯಂಗಳದಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆರೆಯ ಸುತ್ತಮುತ್ತಲಿನ ರೈತರಿಗೆ ವಿವಿಧ ತಳಿಯ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ರೋಟರಿ ಬೆಂಗಳೂರು ರಾಜಮಹಲ್ ವಿಲಾಸ್ ಕ್ಲಬ್, ಪ್ರೆಸಿಡೆನ್ಸಿ ಮತ್ತು ರೋಟರಾಕ್ಟ್ ಕ್ಲಬ್, ರಾಜಮಹಲ್ ವಿಲಾಸ್ ಇನ್ನರ್‌ವೀಲ್ ಕ್ಲಬ್ ಮತ್ತು ರೋಟರಿ ಸಮುದಾಯ ಕಾರ್‍ಪ್ಸ್ ಕೊಯ್ರಾ ಸರೋವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು ೨೪೦ ತೆಂಗಿನಕಾಯಿ ಮತ್ತು ೪೦ಸಾವಿರ ರೂ. ಮೌಲ್ಯದ ವಿವಿಧ ಫಲನೀಡುವ ಮರದ ಸಸಿಗಳನ್ನು ಕೆರೆಯ ಬಳಿ ಹೊಲ ಹೊಂದಿದ ರೈತರನ್ನು ಗುರ್ತಿಸಿ ಅವರಿಗೆ ಉಚಿತವಾಗಿ ನೀಡಲಾಗಿದೆ. ರೈತರು ಮರದ ಸಸಿಗಳನ್ನು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ರೋಟರಿ ಕ್ಲಬ್‌ಗಳಿಗೆ ನಿರಂತರವಾಗಿ ಬೆಂಬಲ ನೀಡಲು ನಮ್ಮ ಅಭಿಮತ ಇರುತ್ತದೆ ಎಂದು ಹೇಳಿದರು.

ಕೊಯಿರ ರೈತ ಮುಖಂಡ ರವಿ ಮಾತನಾಡಿ, ಕೊಯಿರ ಕೆರೆಯ ಪುನಶ್ಚೇತನದಿಂದಾಗಿ ಸಮುದಾಯದ ಕೃಷಿ ಪ್ರಯತ್ನಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಮುಂಬರುವ ತಿಂಗಳಲ್ಲಿ ಕೆರೆಯಲ್ಲಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲಿ ಸೇವೆ ನೀಡಲಾಗುತ್ತದೆ ಎಂದು ರೋಟರಿ ಸಂಸ್ಥೆಯವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆಯಲ್ಲಿ ರೋಟ್ರಾಕ್ಟರ್ಸ್ ಮತ್ತು ರೋಟೇರಿಯನ್‌ಗಳು ಕೊಯಿರಾ ಗ್ರಾಮಸ್ಥರ ಹೊಲಗಳಲ್ಲಿ ವಿವಿಧ ಸಸಿಗಳನ್ನು ನೆಡಲು ರೈತರೊಂದಿಗೆ ತೆರಳಿ ಸಸಿಗಳನ್ನು ನೆಟ್ಟರು.
ಈ ವೇಳೆಯಲ್ಲಿ ಕೊಯಿರ ರೈತ ಮುಖಂಡ ಚಿಕ್ಕೇಗೌಡ, ಗ್ರಾಮಸ್ಥರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*