ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಭಾರತ ದೇಶ ಅಸ್ತಿತ್ವಕ್ಕೆ ಬರುವ ಮುನ್ನ ಹಲವಾರು ರಾಜಮನೆತನಗಳನ್ನು ಬ್ರಿಟಿಷ್ ಸರ್ಕಾರ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಭಾರತೀಯರನ್ನು ಕಡೆಗಣಿಸುತ್ತಿದ್ದರು. ಇಲ್ಲಿನ ಸಂಪತ್ತನ್ನು ದೋಚುವ ಮೂಲಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಪ್ರಾರಂಭಿಸಿ ಕೇವಲ ವ್ಯಾಪಾರಕ್ಕಾಗಿ ಭಾರತವನ್ನು ಆಳಿದರು. ಇವರನ್ನು ಸದೆಬಡಿಯಲು ಭಾರತೀಯರು ಸಿಡಿಲಿನ ಹಾಗೆ ದಂಗೆಗಳನ್ನು ನಡೆಸಿದರು. ಈ ದಂಗೆಗಳಲ್ಲಿ ಹಲವಾರು ಸರ್ವಧರ್ಮಿಯರು ಹುತಾತ್ಮರಾದರು. ಅವರ ಸವಿನೆನಪಿನ ದ್ಯೋತಕವೇ ಈ ಸ್ವತಂತ್ರ ದಿನಾಚರಣೆ ಆಗಿದೆ ಎಂದು ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖುದ್ದೂಸ್ ಪಾಷಾ ತಿಳಿಸಿದರು.
75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮುಸ್ಲಿಂ ಬಾಂಧವರು ಜಾಮಿಯಾ ಮಸೀದಿ ಆವರಣದಲ್ಲಿ ಜಮಾಯಿಸಿ ರಾಷ್ಟ್ರ ದ್ವಜಾರೋಹಣ ನೆರವೇರಿಸಿದರು.
ಈ ವೇಳೆಯಲ್ಲಿ ಕೆಪಿಸಿಸಿ ಸದಸ್ಯ ಚಿನ್ನಪ್ಪ, ಯುವ ಮುಖಂಡ ಸಹದೇಶ್, ಡಾ. ಶಫೀಕ್, ಹಿರಿಯ ಮುಖಂಡ ಅಬ್ದುಲ್ ಹಕೀಮ್ ಸಾಬ್, ಯುವ ಮುಖಂಡರಾದ ಹೈದರ್ ಸಾಬ್, ನಾಸಿರ್, ಬಾಬು, ಆರೀಫ್, ಹರ್ಷದ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Be the first to comment