ಜಿಲ್ಲಾ ಸುದ್ದಿಗಳು
ಕುಮಟ
ಸಮಾಜದ ಆಂತರಿಕ ಸಮಸ್ಯೆಗಳನ್ನ ಸ್ಫಂಧಿಸುವ ದಿಶೆಯಲ್ಲಿ ಸಮಾಜದ ಸಂಘಟನೆಗಳು ಕಾರ್ಯ ಪ್ರವರ್ತರಾಗಬೇಕು. ಆರ್ಥೀಕ, ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತೆ ಮೂಡಿದಾಗ ಮಾತ್ರ ಹಿಂದುಳಿದ ಸಮಾಜಗಳ ಅಭೀವೃದ್ಧಿ ಸಾಧ್ಯ. ಈ ದಿಶೆಯಲ್ಲಿ ಕುಂಬ್ರಿ ಮರಾಠಿ ಸಂಘಟನೆಯು ಕಾರ್ಯ ಪ್ರವರ್ತರಾಗಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು. ಅವರು ದಿ. ೩೦ ರಂದು ಕುಮಟ ತಾಲೂಕಿನ ಕಳವೆಯಲ್ಲಿ ಕುಮಟ ತಾಲೂಕ ಕುಂಬ್ರಿ ಮರಾಠಿ ಅಭೀವೃದ್ಧಿ ಸಂಘದ ಪಧಾದಿಕಾರಿ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕುಂಬ್ರಿ ಮರಾಠಿ ಸಮಾಜವು ಪ್ರೋ. ರವೀವರ್ಮಕುಮಾರ ಅಧ್ಯಕ್ಷತೆಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶೀಫಾರಸ್ಸಿನಂತೆ ದಶಕಗಳ ಹಿಂದೆ ಅತೀ ಹಿಂದುಳಿದ ಪಟ್ಟಿಗೆ ಸೇರಲ್ಪಟ್ಟಿದ್ದರಿಂದ ಸಾಮಾಜಿಕ ನ್ಯಾಯ ದೊರಕಿದಂತಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ, ನಾಗೂರ ಮಾತನಾಡುತ್ತಾ ಪ್ರತಿ ತಾಲೂಕಿನಲ್ಲೂ ಸಮ್ಮೇಳನ ಜರುಗಿಸುವ ಜೋತೆಯಲ್ಲಿ ಸಮಾಜದ ಸಂಘಟನೆಯನ್ನು ಮಾಡುತ್ತಿದ್ದು ಯುವಕರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ತಾಲೂಕಾಧ್ಯಕ್ಷರಾಗಿ ಪುರುಷೋತ್ತಮ: ಕುಮಟ ತಾಲೂಕ ಕುಂಬ್ರಿ ಮರಾಠಿ ಅಭೀವೃದ್ಧಿ ಸಂಘದ ಅಧ್ಯಕ್ಷರಾಗಿ ಶೇಡಿಗದ್ದೆ ಗ್ರಾಮದ ಪುರುಷೋತ್ತಮ ಸೋಮ ಮರಾಠಿ ಅಧ್ಯಕ್ಷರಾಗಿ, ಶೇಷ ಜಾಮು ಮರಾಠಿ ಬಂಗಣೆ (ಗೌರವಾಧ್ಯಕ್ಷ), ನಾಗರಾಜ ಈಶ್ವರ ಮರಾಠಿ, ಯಾಣ (ಕಾರ್ಯದರ್ಶಿ), ಜಯಂತ ಬಡಿಯಾ ಮರಾಠಿ, ಕಳವೆ(ಉಪಾಧ್ಯಕ್ಷ), ಈಶ್ವರ ರಾಮು ಮರಾಠಿ, ಯಲವಳ್ಳಿ(ಉಪಾಧ್ಯಕ್ಷ), ಗೀರೀಶ ವಿಠ್ಠಲ ಮರಾಠಿ, ನಾಗೂರ(ಸಹ ಕಾರ್ಯದರ್ಶಿ), ರಾಮು ಪುಟ್ಟು ಮರಾಠಿ, ಯಾಣ(ಸಂಘಟನೆ ಕಾರ್ಯದರ್ಶಿ), ವಸಂತ ಗಣೇಶ ಮರಾಠಿ, ಯಲವಳ್ಳಿ(ಖಜಾಂಚಿ) ಹಾಗೂ ೧೬ ಜನ ಕಾರ್ಯಗಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
Be the first to comment