ಜಿಲ್ಲಾ ಸುದ್ದಿಗಳು
ಭಟ್ಕಳ್
.ಜನತಾ ಕೋ ಒಪೆರೇಟಿವ ಸೊಸೈಟಿ ಲಿ. ಭಟ್ಕಳ್ ಇದರ ವಾರ್ಷಿಕ ಸಾಮಾನ್ಯ ಸಭೆಯು ಮಾಜಿ ಶಾಸಕ ಹಾಗೂ ಸಂಸ್ಥೆ ಅಧ್ಯಕ್ಷ ಮಂಕಾಳ್ ಎಸ್ ಅವರ ಅಧ್ಯಕ್ಷತೆಯಲ್ಲಿ , ನಿರ್ದೇಶಕರ ಉಪಸ್ಥಿತಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾ ಮಂಟಪದಲ್ಲಿ ಶುಕ್ರವಾರ ನಡೆಯಿತು . ಸಭೆಯಲ್ಲಿ ಸಾವಿರರಾರು ಶೇರುದಾರರು ಭಾಗವಾಸಿದ್ದರು.ಸಭೆಯಲ್ಲಿ ಶೇರುದಾರರು ಆದ ಶಂಕರ್ ಶೆಟ್ಟಿ ಅವರು ಸಾಲ ವಸೂಲಾತಿ ಬಗ್ಗೆ ಕೆಲವೆಂದು ಸಲಹೆ ಸೂಚನೆಗಳನ್ನು ಬ್ಯಾಂಕಿನ ಆಡಳಿತ ಮಂಡಳಿ ಅವರಿಗೆ ನೀಡಿದರು. ಮಾರುಕೇರಿ ಗ್ರಾಮಪಂಚಾಯತ್ ಸದಸ್ಯ ಎಂ.ಡಿ.ನಾಯ್ಕ ಮಾತನಾಡಿ ಭಟ್ಕಳದ ಜನತಾ ಕೋ ಒಪೆರೇಟಿವೆ ಸೊಸೈಟಿ ಬಗ್ಗೆ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪ್ಪ ಆಗೀದ್ದು ಯಾಕೆ , ಬ್ಯಾಂಕಿನ ವ್ಯವಸ್ಥಾಪಕ ಸುದರ್ಶನ್ ಶೆಟ್ಟಿ ಅವರ ಅವರನ್ನು ಯಾಕೆ ಅಮಾನತ್ತು ಮಾಡಿದ್ದು ಎಂದು ಪ್ರಶ್ನೆ ಕೇಳುದರು.ಶೇರುದಾರರು ಬ್ಯಾಂಕಿನ ಸಿಬ್ಬಂದಿ ನೇಮಕಾತಿಗೆ ಸೂಚನೆ ಹೊರಡಿಸಿ , ನೇಮಕಾತಿ ಪರೀಕ್ಷೆ ವಿಳಂಬ ವಾಗುತ್ತಿದೆ ಯಾಕೆ ಎಂದು ಕೇಳಿದರು.
ಶೇರುದಾರರ ಈ ಎಲ್ಲ ಪ್ರಶ್ನೆ ಸಂಸ್ಥೆ ಅಧ್ಯಕ್ಷ ಮಾಜಿ ಶಾಸಕ ಮಂಕಾಳ್ ಎಸ್ ವೈದ್ಯ ಅವರು ಮಾತನಾಡಿ ಮ್ಯಾನೇಜರ್ ಸುದರ್ಶನ ಶೆಟ್ಟಿ ಅವರು ಸಂಸ್ಥೆಯ ಆಡಳಿತ ಮಂಡಳಿ ಕೈಗೆ ಸಿಗದ ಕಾಗದ ಪತ್ರಗಳನ್ನು ವಿಧಾನಸೌಧದವರೆಗೂ ಮುಟ್ಟಿಸಲು ಕಾರಣಿಕರ್ತೃರ್ಬ್, ಸಂಸ್ಥೆಯ ಬಗ್ಗೆ ಅಪ ಪ್ರಚಾರ ಮಾಡಿ 25 ಕೋಟಿ ರೂಪಾಯಿ ಎಫ್.ಡಿ ಹಣ ಗ್ರಾಹಕರು ಹೇಂಪಡೆಯುವಂತೆ ಮಾಡಿದ್ದಾರೆ , ಅವ್ಯವಹಾರ ಮಾಡಿದ್ದಾರೆ , ಸುದರ್ಶನ್ ಶೆಟ್ಟಿ ಅವರನ್ನು ಡಿಸಮಿಸ್ ಮಾಡಲಾಗುವದು ಎಂದು ಸಭೆಯಲ್ಲಿ ಘೋಷಣೆ ಮಾಡಿದರು. ಶಿಬ್ಬಂದಿ ನೇಮಕಾತಿ ಪರೀಕ್ಷೆ ಪರೀಕ್ಷೆ ವಿಳಂಬದ ಬಗ್ಗೆ ಮಾತನಾಡಿ ಶಾಸಕ ಸುನಿಲ್ ನಾಯ್ಕ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿ , ಗೊಂದಲ ಮಾಡಿದಾರೆ, ಸಂಸ್ಥೆ ಉಚ್ಚ್ಗ ನ್ಯಾಯಾಲಯದಲ್ಲಿ ದಾವೆ ಹಾಕಿದೆ, ಶಿಬ್ಬಂದಿ ನೇಮಕಾತಿ ವಿಳಂಬಕ್ಕೆ ಶಾಸಕ ಸುನೀಲ್ ನಾಯ್ಕ ಕಾರಣ ಎಂದು ತಿಳಿಸಿದರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ , ಆಡಳಿತ ಮಂಡಳಿ ಎಲ್ಲ ನಿರ್ದೇಶಕರು ಹಾಜರಿದ್ದರು.
Be the first to comment