ಸುಬ್ರಾಯ ಬಿದ್ರೆಮನೆಯವರ ಬೊಗಸೆ ತುಂಬ ಪ್ರೀತಿ ಲೋಕಾರ್ಪಣೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಯಲ್ಲಾಪುರ

ಸಾಹಿತ್ಯ ಕ್ಷೇತ್ರದಲ್ಲಿದ್ದವರು ಆದಷ್ಟು ಈ ಕ್ಷೇತ್ರಕ್ಕಾಗಿ ತ್ಯಾಗ ಮಾಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಹುದ್ದೆ ಹೊಂದಿದವರು ಸಮಾಜಕ್ಕೆ ಎನನ್ನಾದರು ಕೊಡುಗೆ ನೀಡಬೇಕು. ಸಾಹಿತ್ಯಕ್ಕಾಗಿ ದುಡಿದವರನ್ನು ಗುರುತಿಸುವ ಕಾರ್ಯ ಮಾಡಬೇಕು. ಈ ಕ್ಷೇತ್ರದ ಸಂಘಟನೆಯಲ್ಲಿ ಇನ್ನುಳಿದವರಿಗೂ ಅವಕಾಶಗಳು ಸಿಗುವಂತಾಗಬೇಕು ಎಂದು ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಸ್ಕೇರಿ ಎಂ. ಕೆ. ನಾಯಕ ಹೇಳಿದರು.ಅವರು ಗುರುವಾರ ಬೆಳಿಗ್ಗೆ ಯಲ್ಲಾಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕವಿ ಪತ್ರಕರ್ತ ಸುಬ್ರಾಯ ಬಿದ್ರೆಮನೆಯವರ ‘ಬೊಗಸೆ ತುಂಬ ಪ್ರೀತಿ’ ಕವನ ಸಂಕಲವನ್ನು ಲೋಕಾರ್ಪಣೆಗೊಳಿಸಿಮಾತನಾಡಿದರು.

CHETAN KENDULI

ಕವಿ ಮಗುವಿನಂತಹ ಮುಗ್ದ ಕಣ್ಣು ಹೊಂದಿದವನು. ಕವಿಯಾದವನು ಪ್ರಪಂಚದ ಎಲ್ಲ ವಸ್ತುವನ್ನು ಪ್ರೀತಿಸುತ್ತಾನೆ. ನಿಜವಾದ ಕವಿ ಸೌಂದರ್ಯವನ್ನು‌ ಕುರುಪವನ್ನು ಒಂದೆ ಕಣ್ಣಿನಲ್ಲಿ ನೋಡುತ್ತಾನೆ. ಕವಿಗೆ ಮೇಲು ಕೀಳು ಅನ್ನುವ ಭಾವನೆಗಳು ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಕೃತಿ ಪರಿಚಯಿಸಿದ ವಿಶ್ರಾಂತ ಪ್ರಾಂಶುಪಾಲರಾದ ಬೀರಣ್ಣ ನಾಯಕ ಮೊಗಟಾ, ಬೊಗಸೆ ತುಂಬ ಪ್ರೀತಿ ಕವನ ಸಂಕಲನದಲ್ಲಿ ಸುಬ್ರಾಯ ಬಿದ್ರೆಮನೆಯವರು ಸಾಕಷ್ಟು ಪ್ರೀತಿಯನ್ನು ಉಣಬಡಿಸುವ ಪ್ರಯತ್ನ ಮಾಡಿದ್ದಾರೆ. ಶಿಷ್ಟಾಚಾರ ಬದಿಗಿಟ್ಟು ಕವನ ಸಂಕಲನ ರಚಿಸಲಾಗಿದೆ. ಓದಿದಾಗ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಪ್ರಬುದ್ದವಾದ ಎಲ್ಲರೂ ಓದಬಹುದಾದ ಕವನ ಸಂಕಲನ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಸಾಂದರ್ಭಿಕವಾಗಿ ಮಾತನಾಡಿರು.ಕೃತಿ ಕರ್ತ ಸುಬ್ರಾಯ ಬಿದ್ರೆಮನೆ ಅಭಿಪ್ರಾಯ ಪಟ್ಟು, ಯಕ್ಷಗಾನ ಕುಟುಂಬದಿಂದ ಬಂದ ತಮಗೆ ಯಕ್ಷಗಾನ ಕಲೆ ಒಲಿಯಲಿಲ್ಲ, ಸಾಹಿತ್ಯ ಕ್ಷೇತ್ರ ನನಗೆ ಆಕರ್ಷಿಸಿತು. ಔಪಚಾರಿಕತೆಯನ್ನು ಬದಿಗಿಟ್ಟು ನೇರವಾಗಿ ಈ ಕವನ‌ ಸಂಕಲವನ್ನು ಹೊರ ತಂದಿದ್ದೆನೆ. ಪ್ರೀತಿಯನ್ನು ಬೊಗಸೆ ತುಂಬಿ‌ಕೊಡುವ ಪ್ರಯತ್ನ ಮಾಡಿದ್ದೆನೆ ಎಂದರು.ಇದೆ ಸಂದರ್ಭದಲ್ಲಿ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರ ಹಾಗೂ ಕೃತಿ ಕರ್ತರಾದ ಸುಬ್ರಾಯ ಬಿದ್ರೆಮನೆಯವರನ್ನು ಗೌರವಿಸಲಾಯಿತು.
ಶಿಕ್ಷಕ ಸುಧಾಕರ ನಾಯಕ, ಮಾಸ್ಕೇರಿ ಎಂ.ಕೆ.ನಾಯಕರವರನ್ನು ಪರಿಚಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಶಿಕ್ಷಕ‌ ಸಂಜೀವ ಹೊಸ್ಕೇರಿ ನಿರೂಪಿಸಿದರು. ವೈಟಿಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂದ್ಯಾ ಹಾಗೂ ಶ್ರಾವಣಿ ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಎಸ್ ಎಲ್ ಜಾಲಿಸತ್ಗಿ ವಂದಿಸಿದರು.

Be the first to comment

Leave a Reply

Your email address will not be published.


*