ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಕಿರವತ್ತಿ ಭಾಗದ ಮುಖಂಡರಾದ ವಿಜಯ ಮಿರಾಶಿ ಅವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಕಿರವತ್ತಿಯ ಉರ್ದು ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಗೆ 5000 ನೋಟ್ ಬುಕ್ ಅನ್ನು ವಿತರಿಸಿದರು.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಒಂದು ಲಕ್ಷಕ್ಕೂ ಅಧಿಕ ನೋಟ ಬುಕ್ ಅನ್ನು ನೀಡುತ್ತಿದ್ದಾರೆ. ಇದರ ಭಾಗವಾಗಿ ಕಿರವತ್ತಿಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಂಜುಳಾ ವರದಾನಿ, ಯುವ ಮುಖಂಡ ಅನಿಖೇತ ಮಿರಾಶಿ, ಪ್ರಮುಖರಾದ ರಹಮೇತ್ ಅಬ್ಬಿಗೇರಿ, ರಾಘವೇಂದ್ರ ಗೊಂದಿ, ವಿಲ್ಸನ್ ಫರ್ನಾಂಡೀಸ್, ಮುಬಾರಕ್ ಅಬ್ಬಿಗೇರಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
Be the first to comment