ಜಿಲ್ಲಾ ಸುದ್ದಿಗಳು
ಹೊನ್ನಾವರ
2021-22 ನೇ ಸಾಲಿನ ಸಾಲಿನ ಪ್ರವೇಶಾತಿ ಪಡೆಯಲು ಸರ್ಕಾರಿ ಪೃಥಮ ದರ್ಜೆ ಕಾಲೇಜಿನಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಾಚಾರ್ಯರಾದ ಸುಮಂಗಲಾ ನಾಯ್ಕ್ ತಿಳಿಸಿದ್ದಾರೆ.ಒಂದನೇ ಸೆಮಿಸ್ಟರ್ಗೆ ಪ್ರವೇಶಾತಿ ಪಡೆಯಲು ದಂಡ ರಹಿತವಾಗಿ ಸಪ್ಟೆಂಬರ್ 13 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ತದನಂತರ ದಂಡ ಸಹಿತ ಸಪ್ಟೆಂಬರ್ 23 ರವರೆಗೆ ಪ್ರವೇಶಾತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಕಾಲೇಜ್ಗೆ ಆಗಮಿಸಿ ಅರ್ಜಿ ಪಡೆದು ನಿಯಮಾನುಸಾರ ಪ್ರವೇಶ ಪಡೆಯಲು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ಗಳಾದ ಬಿ.ಎ, ಬಿ.ಕಾಂ,ಬಿ.ಎಸ್. ಇ, ಬಿ.ಬಿ.ಎ, ಬಿ.ಸಿ.ಎ ಕೋರ್ಸ್ಗಳಿವೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಪ್ರಕಾರ ಕರ್ನಾಟಕ ವಿಶ್ವವಿದ್ಯಾಲಯ ನಿಗದಿಪಡಿಸಿದ ಪಠ್ಯಕ್ರಮ ಹಾಗೂ ವಿಷಯ ಮಾನ್ಯತೆ ಪ್ರಕಾರ ವಿಷಯ ವ್ಯಾಸಂಗಕ್ಕೆ ಅವಕಾಶವಿದೆ. ಕಾಲೇಜಿನಲ್ಲಿ ಸ್ಮಾರ್ಟ ತರಗತಿ ಕೋಣೆ ಹೊಂದಿದ್ದು ಸುಸಜ್ಜಿತ ಪ್ರಯೋಗಾಲಯ ಹೊಂದಿದೆ. ಎಲ್ಲಾ ರೀತಿಯ ಪಠ್ಯೇತರ ಚಟುವಟಿಕೆಗಳ ಘಟಕಗಳಿವೆ ಅನುಭವಿ ಭೋದಕ ಭೋದಕೇತರ ಸಿಬ್ಬಂದಿಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಸುಮಂಗಲಾ ನಾಯ್ಕ ರು ಮನವಿ ಮಾಡಿದ್ದಾರೆ.
Be the first to comment