ರಾಜ್ಯ ಸುದ್ದಿಗಳು
ಶಿರಸಿ
ದಿನಾಂಕ: 27-01-2022 ಹಾವೇರಿ ಜಿಲ್ಲೆ ಅಕ್ಕಿಆಲೂರಿನಿಂದ ದಾಸನಕೊಪ್ಪ ಕೊರ್ಲಕಟ್ಟಾ ಮಾರ್ಗವಾಗಿ KA-27 C 2005 ನೊಂದಣಿ ಸಂಖ್ಯೆಯ ಬಜಾಜ ಕಂಪನಿಯ ಮ್ಯಾಕ್ಸಿಮೊ ಪ್ಯಾಸೆಂಜರ ರಿಕ್ಷಾದಲ್ಲಿ ಎಮ್ಮೆಯ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಶ್ರೀ.ಭೀಮಾಶಂಕರ ಸಿನ್ನೂರ ಸಂಗಣ್ಣ ಪಿ.ಎಸ್.ಐ. ಶಿರಸಿ ಎನ್.ಎಂ. ಠಾಣೆ, ಹಾಗೂ ಸಿಬ್ಬಂದಿಯವರೊಂದಿಗೆ ಶಿರಸಿ ನಗರದ ಶಿರಸಿ-ಹುಸರಿ ರಸ್ತೆಯಲ್ಲಿ ಕಸ್ತೂರಬಾ ನಗರ ಕ್ರಾಸ ಹತ್ತಿರ ಆರೋಪಿತರಾದ
1. ಖಾಜಾಮುದ್ದೀನ ಅಲ್ಲಾಭಕ್ಷ ಬೇಪಾರಿ ಪ್ರಾಯ: 39 ವರ್ಷ ವೃತ್ತಿ: ಮಟನ ವ್ಯಾಪಾರ ಸಾ: ಕೆಳಗಿನ ಒಣಿ, ಅಕ್ಕಿಆಲೂರ, ತಾ: ಹಾನಗಲ್ ಜಿ: ಹಾವೇರಿ 2.ಅಲ್ತಾಪ್ ತಂದೆ ಲಾಲಾಸಾಬಾ ಮುಲ್ಲಾ ಪ್ರಾಯ: 25 ವರ್ಷ ಸಾ: ಚೆನ್ನಿಸಿ ನಗರ, ಅಕ್ಕಿಆಲೂರ ತಾ: ಹಾನಗಲ್ ಜಿ: ಹಾವೇರಿ 3. ಮಂಜುನಾಥ ತಂದೆ ಶಂಕ್ರಪ್ಪ ಬಾರ್ಕಿ ಪ್ರಾಯ: 27 ವರ್ಷ ವೃತ್ತಿ: ರೀಕ್ಷಾ ಚಾಲಕ ಸಾ: ಗಡಿಯಂಕನಹಳ್ಳಿ, ತಾ: ಹಾನಗಲ್ ಜಿ: ಹಾವೇರಿ ಇವರು ಸೇರಿಕೊಂಡು 250.ಕೆಜಿ 83 ಗ್ರಾಂ ಎಮ್ಮೆಯ ಮಾಂಸವನ್ನು ಆಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಮ್ಯಾಕ್ಸಿಮೊ ಪ್ಯಾಸೆಂಜರ ರಿಕ್ಷಾದಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಅದರಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣಾ ಗುನ್ನಾ ನಂ.08/2022 ಕಲಂ: 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ-2020,ಕಲಂ 429 ಸಹಿತ 34 ಐ.ಪಿ.ಸಿ ಮತ್ತು ಕಲಂ 66 ಸಹಿತ 192(ಎ) ಐ.ಎಮ್.ವಿ ಆಕ್ಟ ನೇದರಂತೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಈ ಕಾರ್ಯಚರಣಿಯು ಶ್ರೀಮತಿ ಸುಮನ ಪೆನ್ನೇಕರ ಐ.ಪಿ.ಎಸ್, ಮಾನ್ಯ ಪೊಲೀಸ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ. ಹಾಗೂ ಶ್ರೀ ಎಸ್. ಭದ್ರಿನಾಥ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಶ್ರೀ ರವಿ ಡಿ. ನಾಯ್ಕ, ಡಿ.ಎಸ್.ಪಿ. ಶಿರಸಿ, ಶ್ರೀ ರಾಮಚಂದ್ರ ನಾಯಕ, ಸಿ.ಪಿ.ಐ, ಶಿರಸಿ, ರವರ ಮಾರ್ಗದರ್ಶನದಲ್ಲಿ ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ ಪಿ.ಎಸ್.ಐ. ಶಿರಸಿ ಎನ್.ಎಂ. ಠಾಣೆ ರವರ ನೇತೃತ್ವದಲ್ಲಿ ಹಾಗೂ ಸಿಬ್ಬಂದಿ ಯವರಾದ ಶ್ರೀ ಮಂಜುನಾಥ ಕೆಂಚರೆಡ್ಡಿ, ರೋನಾಲ್ಡ್ ಅಲ್ಮೆಡಾ, ಹನುಮಂತ ಮಾಕಾಪುರ, ಶ್ರೀ ಸುರೇಶ ಗಜಬರ, ಶ್ರೀ ಪ್ರದೀಪ ಕೈಟಕರ ಶ್ರೀ ಮೋಹನ ಕೆ ನಾಯ್ಕ ಇವರು ಭಾಗವಹಿಸಿ ಸ್ವತ್ತು ಹಾಗೂ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿರುತ್ತಾರೆ. ತನಿಖೆ ಮುಂದುವರೆದಿರುತ್ತದೆ. ಈ ಕಾರ್ಯಚರಣೆಯ ಬಗ್ಗೆ ಮಾನ್ಯ ಪೊಲೀಸ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
Be the first to comment