ಜಿಲ್ಲಾ ಸುದ್ದಿಗಳು
ಭಟ್ಕಳ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಾಲಯಗಳು ಎನ್ನುವ ಸಬೂಬು ನೀಡಿ ದೇವಸ್ಥಾನಗಳ ತೆರವಿಗೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದು ಆ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ಹೇಳಿಕೆ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಸರ್ಕಾರಕ್ಕೆ ಮತ್ತುಎಲ್ಲಾ ಅಧಿಕಾರಿಗಳಿಗೆ ಈ ಮೂಲಕ ನೇರ ಎಚ್ಚರಿಕೆಯೊಂದನ್ನು ನೀಡುತ್ತಿದ್ದೇನೆ. ‘ನಮ್ಮ ಜಿಲ್ಲೆಯ ಅಥವಾ ನನ್ನ ಭಟ್ಕಳ್ ತಾಲ್ಲೂಕಿನ ಯಾವುದೇ ಹ ದೇವಾಲಯಗಳನ್ನು ಮುಟ್ಟುವ ಮುನ್ನ ಸಾವಿರಾರು ಬಾರಿ ಯೋಚಿಸಿ, ನನ್ನೊಂದಿಗೆ ಸಮಸ್ತ ಹಿಂದೂ ಸಮಾಜವನ್ನು ಎದುರಿಸಬೇಕಾದೀತು’. “ನಮ್ಮ ಧರ್ಮದ ವಿಚಾರದಲ್ಲಿ ಯಾವುದೇ ಅಧಿಕಾರಿಯು ಉದ್ಧಟತನ ಪ್ರದರ್ಶಿಸಿದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾದೀತು”, ಹಿಂದುಗಳ ಓಟಲ್ಲಿ ಗೆದ್ದು ಬಿ.ಜೆ.ಪಿ ಸರಕಾರ ಈಗ ಹಿಂದುಗಳಿಗೆ ತಕ್ಕ ಪಾಠ ಕಲಿಸುತ್ತಿದೆ ಎಂದು ಕಿಡಿ ಕಾರಿದರು.
“ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲಾ ನಮ್ಮ ದೇವಾಲಯಗಳ ರಕ್ಷಣೆಗೆ ಯಾವ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಮತ್ತು ಯಾವುದೇ ರೀತಿ ಹೋರಾಟಕ್ಕೂ ನಾನು ಸಿದ್ದ ಎಂದು ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Be the first to comment