ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಗ್ರಾಮೀಣ ಪ್ರದೇಶ ಜನರಿಗೂ ಶುದ್ಧ ಕುಡಿಯುವ ನೀರು ಒರುಗಿಸಬೇಕು ಎಂಬ ಸದುದ್ದೇಶದಿಂದ ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಪ್ರತಿಫಲವಾಗಿ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 3 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 2020-21ನೇ ಸಾಲಿನ ಜಲಜೀವನ ಮೀಷನ್ ಯೋಜನೆಯಡಿಯಲ್ಲಿ ಮನೆ ನಳ ಸಂಪರ್ಕದ ಅಂದಾಜು 1.20ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷದ ಆಡಳಿತದ 2 ವರ್ಷ ಪೂರ್ಣಗೊಳ್ಳುವ ಸಮಯದಲ್ಲಿಯೇ ಕುಂಟೋಜಿ ಪಂಚಾಯತಿಗೆ ಮಹತ್ತರ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕೆಲ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಇನ್ನೂ ಈ ಯೋಜನೆ ಜಾರಿಯಾಗಿಲ್ಲ. ಆದರೆ ಕುಂಟೋಜಿ ಪಂಚಾಯತಿಯ ಸರ್ವ ಗ್ರಾಮಕ್ಕೂ ಯೋಜನೆ ಜಾರಿಯಾಗಿದ್ದು ಕಾಮಗಾರಿಗೆ ಗ್ರಾಮೀಣ ಜನರು ಸಹಕರಿಸಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಬಿಜೆಪಿ ಯುವ ಮುಖಂಡ ಸಿದ್ದ ಹೆಬ್ಬಾಳ ಮಾತನಾಡಿ, ಕುಂಟೋಜಿ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಂದಿರಲಿಲ್ಲಾ. ಆದರೆ ಸಿಗುತ್ತಿರುವ ನೀರು ಕುಟಿಯಲು ಯೋಗ್ಯವಾಗಿರಲಲ್ಲಾ. ಇದನ್ನು ಅರಿತ ಶಾಸಕರು ಇಡೀ ಪಂಚಾಯತಿಯ ಒಳಪಡುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಿದ್ದ ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನೂರಜಾನಬಿ ಗುರಿಕಾರ, ಸದಸ್ಯರಾದ ಶಾಂತಪ್ಪ ಕಂಬಳಿ, ಭೀಮವ್ವ ಕಂಬಳಿ, ಮೆಬೂಬ ನಿಡಗುಂದಿ, ಶೇಖಪ್ಪ ಒಣರೊಟ್ಟಿ, ಮಂಜುಳಾ ಹುಲಗಣ್ಣಿ, ನಂದಾ ಬಾಗೇವಾಡಿ, ಭೀಮವ್ವ ಬಜಂತ್ರಿ, ರಾಚಪ್ಪ ಜಗಲಿ, ಹಣಮಂತ ಮಾರನಾಳ, ಸುಮಂಗಳಾ ಬಿರಾದಾರ, ಶೋಭಾ ಬಿರಾದಾರ, ಗುರುಬಾಯಿ ಹುಲಗಣ್ಣಿ, ಬಸಮ್ಮ ಇಂಗಳಗೇರಿ, ರಾಮನಗೌಡ ಪಾಟೀಲ, ಮುಖಂಡರಾ ಗಂಗಾಧರ ಹುಲಗಣ್ಣಿ, ಶ್ರೀಶೈಲ ಪಲ್ಲೇದ, ಮಲ್ಲನಗೌಡ ಬಿರಾದಾರ, ಶೀವಪ್ಪ ಒಣರೊಟ್ಟಿ, ಜಗದೀಶ ಲಮಾಣಿ, ಪಿಡಿಓ ಅಯ್ಯಪ್ಪ ಮಲಗಲದಿನ್ನಿ, ಹಣಮಂತ ಬಜಂತ್ರಿ, ಗಣೇಶ ಹೆಬ್ಬಾಳ ಇದ್ದರು.
Be the first to comment