ರಾಜ್ಯ ಸುದ್ದಿಗಳು
ದೇವನಹಳ್ಳಿ
ಬಯಲು ಸೀಮೆ ಜಿಲ್ಲೆಯಾಗಿರುವುದರಿಂದ ಸಾಕಷ್ಟು ರೈತರು ಮಳೆಯಾಶ್ರಿತ ರಾಗಿ ಬೆಳೆಯನ್ನು ಯತೇಚ್ಛವಾಗಿ ಬೆಳೆದಿದ್ದಾರೆ. ಸರಕಾರ ಜ.೧ರಿಂದ ರಾಗಿ ಖರೀದಿಸಲು ೨೦ಕ್ವಿಂಟಾಲ್‌ಗೆ ಸೀಮಿತಗೊಳಿಸಿರುವುದು ಸರಿಯಷ್ಟೇ ಆದರೆ, ನಮ್ಮ ಜಿಲ್ಲೆಗೆ ಈ ಹಿಂದೆ ಇದ್ದಂತಹ ೫೦ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಒತ್ತಾಯಿಸಿದರು.ದೇವನಹಳ್ಳಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ರಾಗಿ ಖರೀದಿ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಹೆಚ್ಚುವರಿ ರಾಗಿ ಬೆಳೆಗಾರರಿಗೆ ಸರಕಾರ ರಾಗಿ ಖರೀದಿಯನ್ನು ಹೆಚ್ಚಿಸಬೇಕು. ರೈತರ ನೆರವಿಗೆ ಸರಕಾರ ಧಾವಿಸಬೇಕು. ರೈತರಿಗೆ ಜೀವನಾಡಿಯಾದಂತಹ ಯಾವುದೇ ನದಿ, ಹೊಳೆಗಳು ಈ ಭಾಗದಲ್ಲಿ ಹರಿಯುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ರಾಗಿಯನ್ನು ಬೆಳೆಯುವ ರೈತರಿರುವುದರಿಂದ ರೈತರಿಗೆ ಸಹಕಾರ ನೀಡುವಂತಾಗಬೇಕು. ಈ ಬಗ್ಗೆ ಈಗಾಗಲೇ ಸಚಿವರ ಆಪ್ತ ಸಹಾಯಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವರ ಗಮನಕ್ಕೆ ತರಲಾಗುತ್ತದೆ. ಕೂಡಲೇ ಸರಕಾರ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ತಡೆಯಬೇಕು. ಇಲ್ಲವಾದರೆ ಸದನದಲ್ಲಿ ಪ್ರಶ್ನೆ ಮಾಡುವುದರ ಮೂಲಕ ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ರೈತರು ರಾಗಿ ಖರೀದಿ ಇಂಡೆಂಟ್‌ಗಳನ್ನು ಪಡೆದಿರುವುದನ್ನು ಶಾಸಕರಿಂದ ಪಡೆದುಕೊಂಡರು. ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪಿಕಾರ್ಡ್‌ಬ್ಯಾಂಕ್ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಸಿಬ್ಬಂದಿ, ರಾಗಿ ಖರೀದಿ ನೊಂದಣಾಧಿಕಾರಿಗಳು, ರೈತರು ಇದ್ದರು.
Be the first to comment